ಬೆಂಗಳೂರು:- ಆಸ್ತಿ ತೆರೆಗೆ ಬಾಕಿ ಉಳಿಸಿಕೊಂಡಿದ್ದ ತೆರಿಗೆದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡಿದ್ದ ಡೆಡ್ಲೈನ್ ಮುಕ್ತಾಯಗೊಂಡಿದೆ.
Advertisement
ಹೀಗಾಗಿ ತೆರಿಗೆ ಕಟ್ಟದವರಿಗೆ ಇಂದಿನಿಂದ ಬಡ್ಡಿ, ಹರಾಜು ಅಸ್ತ್ರ ಪ್ರಯೋಗಿಸಲು ಪಾಲಿಕೆ ಸಜ್ಜಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒನ್ ಟೈಮ್ ಸೆಟ್ಲಮೆಂಟ್ ಯೋಜನೆಯಡಿ ಬಾಕಿ ಆಸ್ತಿ ತೆರಿಗೆ ಪಾವತಿಗೆ ಈ ತಿಂಗಳ ಕೊನೆವರೆಗೆ ಟೈಮ್ ನೀಡಿತ್ತು. ಬಾಕಿ ತೆರಿಗೆ ವಸೂಲಿಗೆ ಸರ್ಕಾರ ನೀಡಿದ್ದ ಗಡುವು ಇವತ್ತಿಗೆ ಅಂತ್ಯವಾಗಿದೆ.
ಈವರೆಗೆ ಬೆಂಗಳೂರು ನಗರದಲ್ಲಿ ಓಟಿಎಸ್ ಮೂಲಕ ಶೇ 60 ರಷ್ಟು ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ. ಇತ್ತ ಅವಕಾಶ ಕೊಟ್ಟರೂ ತೆರಿಗೆ ಕಟ್ಟದ ಶೇ 40 ರಷ್ಟು ತೆರಿಗೆದಾರರಿಗೆ ಬಿಸಿ ಮುಟ್ಟಿಸಲು ಪಾಲಿಕೆ ತಯಾರಿ ನಡೆಸಿದೆ.
ಡಿಸೆಂಬರ್ 1 ದುಪ್ಪಟ್ಟು ದಂಡದ ಜೊತೆಗೆ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದ್ದು, ಬಾಕಿ ತೆರಿಗೆಗೆ ಬಾಕಿಯಷ್ಟೇ ದಂಡ ಕೂಡ ಬೀಳಲಿದೆ.