ಸಿಗದ ಭೂಪರಿಹಾರ: AC ಕಚೇರಿ ವಸ್ತುಗಳ ಜಪ್ತಿಗೆ ಮುಂದಾದ ಸಂತ್ರಸ್ತ ರೈತರು!

0
Spread the love

ರಾಯಚೂರು:- 14 ವರ್ಷಗಳಿಂದ ಭೂಪರಿಹಾರ ಸಿಗದ ಹಿನ್ನೆಲೆ ಸಂತ್ರಸ್ತ ರೈತರು AC ಕಚೇರಿಯಲ್ಲಿನ ವಸ್ತುಗಳ ಜಪ್ತಿಗೆ ಮುಂದಾಗಿರುವ ಘಟನೆ ರಾಯಚೂರಿನಲ್ಲಿ ಜರುಗಿದೆ.

Advertisement

ಜಿಲ್ಲೆಯ ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ಘಟನೆ ಜರುಗಿದ್ದು, ಭೂಪರಿಹಾರ ಸಿಗದ ಹಿನ್ನೆಲೆ ರಾಯಚೂರು ಸಹಾಯಕ ಆಯುಕ್ತರ ಕಚೇರಿ ವಸ್ತುಗಳ ಜಪ್ತಿಗೆ ರೈತರು ಮುಂದಾಗಿದ್ದಾರೆ.

ಸರಿ ಸುಮಾರು 2009-10ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರು ಈವರೆಗೂ ಪರಿಹಾರವನ್ನು ಪಡೆದಿಲ್ಲ. ಇದರಿಂದ ಸೂಕ್ತ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ರೈತರ ಪರ ಆದೇಶ ನೀಡಿದ್ದರೂ ಕೂಡ ಇಲ್ಲಿಯವರೆಗೂ ರೈತರಿಗೆ ಯಾವುದೇ ಪರಿಹಾರ ನೀಡಲ್ಲ. ಸುಧೀರ್ಘ ಹೋರಾಟದ ಮಧ್ಯೆ ವಯೊಸಹಜ ಕಾರಣದಿಂದಾಗಿ 14 ಜನರು ಸಾವನ್ನಪ್ಪಿದ್ದಾರೆ. ಇದೀಗ ಮೃತ ರೈತರ ಮಕ್ಕಳಿಂದಲೂ ಹೋರಾಟ ಮುಂದುವರೆದಿದೆ.

ಒಟ್ಟು 32 ಜನ ರೈತರ 33 ಎಕರೆಯ ಸುಮಾರು 3 ಕೋಟಿ ರೂ. ಪರಿಹಾರ ಬಾಕಿಯಿದೆ. ಹೀಗಾಗಿ ನ್ಯಾಯಾಲಯ ಸೂಚನೆ ಹಿನ್ನೆಲೆ ಸಹಾಯಕ ಆಯುಕ್ತ ಕಚೇರಿ ವಸ್ತುಗಳ ಜಪ್ತಿಗೆ ರೈತರು ಮುಂದಾಗಿದ್ದರು. ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ಇನ್ನಿತರ ವಸ್ತುಗಳ ಜಪ್ತಿಗೆ ಬಂದಿದ್ದ ರೈತರು ವಸ್ತುಗಳನ್ನ ಹೊರಗಡೆ ತಂದಿದ್ದರು. ರಾಯಚೂರು ಸಹಾಯಕ ಆಯುಕ್ತರ ಭರವಸೆ ಮೇರೆಗೆ ಕಾಲಾವಕಾಶ ನೀಡಿರುವ ರೈತರು, ಪರಿಹಾರ ದೊರೆಯುವ ಭರವಸೆಯಲ್ಲಿ ಜಪ್ತಿ ಮಾಡಲು ಮುಂದಾಗಿದ್ದ ವಸ್ತುಗಳನ್ನ ಬಿಟ್ಟು ಹೋಗಿದ್ದಾರೆ.

ಒಟ್ಟಾರೆ ಪರಿಹಾರ ಸಿಗದಿದ್ದರೆ ರೈತರ ಆಕ್ರೋಶ ಮತ್ತಷ್ಟು ಭುಗಿಲೇಳುವ ಸಾಧ್ಯತೆ ಇದೆ.


Spread the love

LEAVE A REPLY

Please enter your comment!
Please enter your name here