ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಪೋಷಕರ ನೆನಪು-ಪತ್ರ ವಾಚನ’ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪೋಷಕರು ನಮ್ಮ ಜೀವನದ ಅಡಿಗಲ್ಲುಗಳು. ಅವರ ಪ್ರೀತಿಯ ತ್ಯಾಗ, ಮಾರ್ಗದರ್ಶನ, ಮತ್ತು ಬೆಂಬಲವೇ ನಮ್ಮ ಜೀವನದ ಬೆಳಕು. ಪೋಷಕರನ್ನು ನೆನೆಯುತ್ತಾ ಕಾರ್ಯಕ್ರಮದಲ್ಲಿ ಅವರನ್ನು ಸ್ಮರಿಸುವ, ಅವರಿಗೆ ಕೃತಜ್ಞತೆ ಸಲ್ಲಿಸುವ ಒಂದು ವಿಶೇಷ ದಿನವಾಗಿ, ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪತ್ರ ಬರೆಯುವ ಮೂಲಕ ಆಚರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಸ್ತಲಿಖಿತ ಪತ್ರವನ್ನು ಬರೆದು, ಸಾಮೂಹಿಕವಾಗಿ ಅದನ್ನು ಓದಿ, ತಂತಮ್ಮ ಮನೆಗೆ ಅಂಚೆ ಮೂಲಕ ಕಳಿಸಿದರು.

Advertisement

ಈ ವಿಶೇಷ ಪತ್ರ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಂಶುಪಾಲ ಡಾ. ಎಮ್.ಎಮ್. ಅವಟಿ ಮಾತನಾಡಿ, ತಂದೆ-ತಾಯಿಗಳೇ ನಮ್ಮ ಪ್ರಥಮ ಗುರುಗಳು ಮತ್ತು ಮಾರ್ಗದರ್ಶಕರು ಎಂದರು. ಎಲೆಕ್ಟಿçಕಲ್ ವಿಭಾಗದ ಮುಖ್ಯಸ್ಥ ಡಾ. ಈರಣ್ಣ ಕೋರಚಗಾಂವ ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಪ್ರೊ. ಮಲ್ಲಿಕಾರ್ಜುನ ಜಿ.ಡಿ. ಮತ್ತು ಪ್ರೊ. ತೆಹಸಿನ್ ಶಿಗ್ಲಿ, ನಡೆಸಿಕೊಟ್ಟರು. ಪ್ರೊ. ಜಗದೀಶ ಶಿವನಗುತ್ತಿ ವಂದಿಸಿದರು. ಪ್ರೊ. ಗೌತಮ ರೇವಣಕರ, ಪ್ರೊ. ದಯಾನಂದ ಗೌಡರ, ಪ್ರೊ. ಲೋಕೇಶ, ಪ್ರೊ. ರಮೇಶ ಬಡಿಗೇರ, ಪ್ರೊ. ಆರ್.ವಿ. ಕಡಿ, ಪ್ರೊ. ಐ.ಎಸ್. ಪಾಟೀಲ, ಪ್ರೊ. ಅಶ್ವಿನಿ ಅರಳಿ, ಪ್ರೊ. ಶೈಲಜಾ ಮುದೇನಗುಡಿ, ಪ್ರೊ. ಲೋಹಿತ್, ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ಸುನಿಲ ಪಾಟೀಲ, ಪ್ರೊ. ವೀರೇಶ ಮಾಗಳದ, ಪ್ರೊ. ವಿಜಯಕುಮಾರ ಮಾಲಗಿತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಬಸವರಾಜ ಪಾಟೀಲ ಅವರನ್ನೊಳಗೊಂಡು ಇತರ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here