ನಿಷ್ಠೆಯಿಂದ ಸೇವೆ ಸಲ್ಲಿಸುವುದು ಮುಖ್ಯ: ಎಚ್.ಎ. ಬಂಡಿವಡ್ಡರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕ ಸೇವೆ ಸಲ್ಲಿಸಲು ದೊರೆತ ಅವಕಾಶವು ತಾಯಿಯ ಋಣವಿದ್ದಂತೆ. ಹೇಗೆ ತಾಯಿಯ ಋಣವನ್ನು ಏಳೇಳು ಜನ್ಮಕ್ಕೂ ತೀರಿಸಲು ಸಾಧ್ಯವಿಲ್ಲವೋ ಹಾಗೇ ಸಾರ್ವಜನಿಕ ಸೇವಾ ಸಿಬ್ಬಂದಿಯನ್ನು ಅವರ ಸೇವಾ ಅವಧಿಯಿಂದ ನಿವೃತ್ತಿವರೆಗೂ ಸಾಕಿ ಸಲಹುವ ಸರಕಾರ ಅಥವಾ ಸಂಸ್ಥೆಗಳ ಋಣ ಕೂಡಾ ತೀರಿಸಲು ಎಂದಿಗೂ ಆಗದು. ಅಂತೆಯೇ ನಿಷ್ಠೆಯಿಂದ ಸೇವೆ ಸಲ್ಲಿಸುವುದು ಕೂಡ ಅಷ್ಟೇ ಮುಖ್ಯ ಎಂದು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಎಚ್.ಎ. ಬಂಡಿವಡ್ಡರ ನುಡಿದರು.

Advertisement

ಅವರು ಗದಗ-ಬೆಟಗೇರಿ ನಗರಸಭೆಯ ಆರೋಗ್ಯ ವಿಭಾಗದಲ್ಲಿ ಸ್ವಚ್ಚತಾ ಮೇಲ್ವಿಚಾರಕರಾಗಿ ಸೇವಾ ನಿವೃತ್ತಿ ಹೊಂದಿದ ಯಲ್ಲಪ್ಪ ಈ.ಬೇಂದ್ರೆ ಅವರ ನಿವೃತ್ತಿ ಪ್ರಯುಕ್ತ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಪೌರಾಯುಕ್ತರ ಶುಭ ಹಾರೈಕೆ ಸಂದೇಶದೊAದಿಗೆ ಗದಗ-ಬೆಟಗೇರಿ ನಗರಸಭೆ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಆಶ್ರಯದಲ್ಲಿ ವಾಯ್.ಇ. ಬೇಂದ್ರೆಯವರಿಗೆ ಕಾರ್ಯಾಲಯ ವ್ಯವಸ್ಥಾಪಕ ಪರುಶುರಾಮ ಶೇರಖಾನೆ, ಪರಿಸರ ಅಭಿಯಂತರ ಆನಂದ್ ಬದಿ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೆಂಕಟೇಶ ರಾಮಗಿರಿ, ಎಂ.ಎನ್. ಶಾಲಗಾರ ನೇತೃತ್ವದಲ್ಲಿ ಶಾಲು ಹೊದೆಸಿ ಗೌರವಿಸಿ ಸತ್ಕರಿಸಿದರು.

ಸಮಾರಂಭದಲ್ಲಿ ನಾಗೇಶ್ ಗುರಣ್ಣವರ, ಡಿ.ಎಚ್. ಸೀತಿಮನಿ, ಎಸ್.ಎ. ಅಗಸಿಮನಿ, ಎಂ.ಆರ್. ಪಾಟೀಲ್, ಜಿ.ಕೆ. ಬಳ್ಳಾರಿ, ರಮೇಶ್ ನಾಗಲೀಕರ್, ಎ.ಎನ್. ಪುಣೇಕರ, ಎಸ್.ವಿ. ತೋಟಗಿ, ರಾಜು ಬಾಕಳೆ ಹಾಗೂ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೆಂಕಟೇಶ ರಾಮಗಿರಿ ಸ್ವಾಗತಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here