ವರ್ಷಿಣಿ ಅಭಿನಯಕ್ಕೆ ಪ್ರೇಕ್ಷಕರ ಮೆಚ್ಚುಗೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಟರಂಗ ಸಾಂಸ್ಕೃತಿಕ ಕೇಂದ್ರ ಗದಗ ಸಂಸ್ಥೆಯ ಮಕ್ಕಳಿಂದ ಪುಣ್ಯಕೋಟಿ ರೂಪಕ ಪ್ರದರ್ಶನ ನಗರದ ಶ್ರೀ ಜಗದ್ಗುರು ತೋಂಟದಾರ್ಯ ಮಠದ ಆವರಣದಲ್ಲಿ ಜರುಗಿತು. ಈ ರೂಪಕ ಪ್ರದರ್ಶನದಲ್ಲಿ ವರ್ಷಿಣಿ ಗಂಗಣ್ಣವರ ಗೊಲ್ಲನ ಹೆಂಡತಿಯ ಪಾತ್ರದಲ್ಲಿ ತಮ್ಮ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಂದ ಮಾಡಿಸುತ್ತಿರುವ ನಟರಂಗ ಸಾಂಸ್ಕೃತಿ ಕೇಂದ್ರದ ಅಧ್ಯಕ್ಷ ಸೋಮು ಚಿಕ್ಕಮಠ, ಪುಣ್ಯಕೋಟಿ ನಾಟಕದ ನಿರ್ದೇಶಕ ಮಾಂತೇಶ್ ಗಜೇಂದ್ರಗಡ ಹಾಗೂ ತಂಡದ ಎಲ್ಲ ಸದಸ್ಯರಿಗೆ ಅಭಿನಂದಿಸಿದ್ದಾರೆ.

Advertisement

ಧಾರವಾಡ ರಂಗಾಯಣ ನಿರ್ದೇಶಕರಾದ ರಾಜು ತಾಳಿಕೋಟಿ, ಡಾ. ಜಿ.ಬಿ. ಪಾಟೀಲ್, ವಿವೇಕಾನಂದಗೌಡ ಪಾಟೀಲ್, ಪ್ರೊ. ಕೆ.ಎಚ್. ಬೇಲೂರ, ಶ್ರೀನಿವಾಸ್ ಹುಯಿಲಗೋಳ, ಚನ್ನವೀರಶಾಸ್ತಿç ಖಡಣಿ, ವಿಜಯಕುಮಾರ ಹಿರೇಮಠ, ಪ್ರೊ. ಬಾಹುಬಲಿ ಜೈನರ, ಅಜಿತ್ ಘೋರ್ಪಡೆ, ರಂಗಾಯಣದ ಕೇಶವ್ ಬಡಿಗೇರ್, ಸೋಮಶೇಖರ್ ಚಿಕ್ಕಮಠ, ಪೂಜಾ ಸೋಮಶೇಖರ್ ಚಿಕ್ಕಮಠ, ಬಸವರಾಜ ಮುಖಂಡಮಠ, ನಾಗರಾಜ ಮಿಸಾಳ, ನಾಗರಾಜ ಬಡಿಗೇರ, ಅಕ್ಷತಾ ಹಿರೇಮಠ, ಜ್ಯೋತಿ ಅಲ್ಕುಂದಿ, ಮಹಾಂತೇಶ ಹೂಗಾರ, ಸಂತೋಷ ಜಾಲಿಯಾಳ, ಚಂದ್ರಶೇಖರ ಗಂಗಣ್ಣವರ, ಶ್ರೀಮತಿ ಪ್ರಭಾ ಚ. ಗಂಗಣ್ಣವರ ಹಾಗೂ ವೀರಪ್ಪ ವೀರವ್ವ ಹೊಸಳ್ಳಿ ಸೇರಿದಂತೆ ಅನೇಕರು ಪ್ರೇಕ್ಷಕರು ರೂಪಕವನ್ನು ವೀಕ್ಷಿಸಿ ಮಕ್ಕಳ ಅಭಿನಯವನ್ನು ಶ್ಲಾಘಿಸಿದರು.


Spread the love

LEAVE A REPLY

Please enter your comment!
Please enter your name here