ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಕಳಕಪ್ಪ ನಾಗಪ್ಪ ಬಂಡಿ ಆದಿಯೋಗಿಯ ಅದ್ಭುತವಾದ ಮಣ್ಣಿನ ಮೂರ್ತಿ ತಯಾರಿಸಿದ್ದಾನೆ.
ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ನಲ್ಲಿ ನಡೆಯುವ ಸ್ಪರ್ಧೆಗಾಗಿ ಈ ಮಣ್ಣಿನ ಮೂರ್ತಿಯನ್ನು ಕಳಕಪ್ಪ ತಯಾರಿಸಿದ್ದು, ಅವನಿಗೆ ಚಿತ್ರಕಲಾ ಶಿಕ್ಷಕ ನೆಹರೂ ಮನೋಳಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಕಳಕಪ್ಪನ ಈ ಕಾರ್ಯಕ್ಕೆ ಶಾಲೆಯ ಎಸ್.ಡಿ.ಎಂ.ಸಿ, ಅಧ್ಯಕ್ಷರು, ಸದಸ್ಯರ, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಯವರ ಸಹಕಾರ ದೊರೆತಿರುವುದು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗಿದೆ.
ಆನ್‌ಲೈನ್ ಸ್ಪರ್ಧೆಗೆಂದು ಈ ಮಣ್ಣಿನ ಮೂರ್ತಿಯನ್ನು ತಯಾರಿಸಿದ್ದೇನೆ. ಗುಳ್ಳವ್ವನ ಕೆರೆಯಿಂದ ಮಣ್ಣು ತಂದು ನಮ್ಮ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಿಂದ ಈ ಆದಿಯೋಗಿ ಮೂರ್ತಿಯನ್ನು ಎರಡು ಗಂಟೆಯೊಳಗೆ ತಯಾರಿಸಿದ್ದೇನೆ. ಭವಿಷ್ಯದಲ್ಲಿ ಉತ್ತಮ ಕಲಾಕಾರನಾಗುವ ಕನಸನ್ನು ಹೊಂದಿದ್ದೇನೆ ಎನ್ನುತ್ತಾನೆ ವಿದ್ಯಾರ್ಥಿ ಕಳಕಪ್ಪ.
ವಿದ್ಯಾರ್ಥಿಯ ಸಹಜ ಆಸಕ್ತಿಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದ್ದೇನೆ. ವಿದ್ಯಾರ್ಥಿಗಳು ಇಚಿಥಹ ಸ್ಪರ್ಧೆಗಳಲ್ಲಿ ಭಾಗವಹಿಸುವದು ಮುಖ್ಯ. ಕಳಕಪ್ಪನಲ್ಲಿ ಈ ಆಸಕ್ತಿ ಇತ್ತು. ಹೀಗಾಗಿ ಆತ ಈ ಮಣ್ಣಿನ ಮೂರ್ತಿಯನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾನೆ ಎಂದು ಚಿತ್ರಕಲಾ ಶಿಕ್ಷಕ ನೆಹರೂ ಮನೋಳಿ ಸಚಿತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಈ ಕಲಾ ಪ್ರತಿಭೆಗೆ ಗ್ರಾಮಸ್ಥರು, ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.


