HomeLife Styleವಾರದ ಈ ದಿನದಲ್ಲಿ ಉಗುರು ಕತ್ತರಿಸಿದ್ರೆ ಬಡತನದ ಸಮಸ್ಯೆಯೇ ಬರಲ್ವಂತೆ!

ವಾರದ ಈ ದಿನದಲ್ಲಿ ಉಗುರು ಕತ್ತರಿಸಿದ್ರೆ ಬಡತನದ ಸಮಸ್ಯೆಯೇ ಬರಲ್ವಂತೆ!

For Dai;y Updates Join Our whatsapp Group

Spread the love

ಉಗುರುಗಳನ್ನು ಕತ್ತರಿಸುವುದು ಆರೋಗ್ಯಕರವಾದ ಅಭ್ಯಾಸ. ಬೆರಳು ಹಾಗೂ ಉಗುರಿನ ಸಂಧಿಯಲ್ಲಿ ಸಿಲುಕಿಕೊಳ್ಳುವ ಕೊಳಕು ಮತ್ತು ಸೂಕ್ಷ್ಮ ಜೀವಿಗಳು ಸಂಗ್ರಹವಾಗುವುದನ್ನು ಸುಲಭವಾಗಿ ತಡೆಗಟ್ಟಬಹುದು. ಆದರೆ ಅದೇ ಉಗುರುಗಳನ್ನು ಕತ್ತರಿಸುವಾಗ ಕೆಲವು ಸಂಗತಿಯನ್ನು ಅರಿತಿರಬೇಕು. ಹಿಂದೂ ನಂಬಿಕೆ ಹಾಗೂ ಕೆಲವು ಸಂಪ್ರದಾಯಗಳ ಪ್ರಕಾರ ಉಗುರನ್ನು ಎಲ್ಲಾ ಸಮಯದಲ್ಲೂ ಕಟ್ ಮಾಡಬಾರದು. ಅದು ವ್ಯಕ್ತಿಗೆ ನಕಾರಾತ್ಮಕ ಫಲವನ್ನು ನೀಡುವುದು ಎಂದು ಹೇಳಲಾಗುವುದು.

ನಮ್ಮ ಅನೇಕ ಧಾರ್ಮಿಕ ಗ್ರಂಥಗಳೂ ಉಗುರು ಕತ್ತರಿಸುವ ನಿಯಮಗಳ ಬಗ್ಗೆ ಉಲ್ಲೇಖಿಸುತ್ತವೆ. ಈ ನಿಯಮಗಳನ್ನು ಅನುಸರಿಸಿದಲ್ಲಿ ಮಾತ್ರ ನಿಮಗೆ ಉತ್ತಮ ಶುಭ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ನಿಮ್ಮ ಉಗುರುಗಳನ್ನು ಕತ್ತರಿಸಬಾರದು ಎಂದು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ಉಗುರು ತೆಗೆಯುವುದರಿಂದ ಲಕ್ಷ್ಮಿ ದೇವಿ ಸಂತುಷ್ಟಳಾಗುವುದಿಲ್ಲ ಎಂದು ನಂಬಲಾಗಿದೆ. ಜೊತೆಗೆ ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಸೂರ್ಯಾಸ್ತದ ಸಮಯದಲ್ಲಿ ಮತ್ತು ನಂತರ ನಿಮ್ಮ ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ.

ಹಾಗಿದ್ರೆ ಯಾವ ದಿನದಲ್ಲಿ ಉಗುರುಗಳನ್ನು ಕತ್ತರಿಸಬಹುದು? ಹಾಗೂ ಅದರಿಂದ ಏನು ಪ್ರಯೋಜನವಾಗಬಹುದು? ಹಾಗೆಯೇ ಯಾವ ದಿನದಂದು ಈ ಕೆಲಸವನ್ನು ಮಾಡಲೇಬಾರದು ಎನ್ನುವುದರ ಬಗ್ಗೆ ತಿಳಿಯೋಣ.

ಸೋಮವಾರ: ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ. ಈ ದಿನ ಚಂದ್ರ ಮತ್ತು ಮನಸ್ಸಿಗೆ ಸಂಬಂಧಿಸಿದೆ. ಆದ್ದರಿಂದ ಸೋಮವಾರದಂದು ನಿಮ್ಮ ಉಗುರುಗಳನ್ನು ಕತ್ತರಿಸುವುದರಿಂದ ನಿಮ್ಮ ಜೀವನದಲ್ಲಿ ದುಷ್ಪರಿಣಾಮವನ್ನು ಉಂಟುಮಾಡುವಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಮಂಗಳವಾರ: ಹನುಮಂತ ದೇವರನ್ನು ಪೂಜಿಸಲು ಮಂಗಳವಾರವನ್ನು ಪರಿಗಣಿಸಲಾಗುತ್ತದೆ. ಹಾಗೆಯೇ ಈ ದಿನಗಳಲ್ಲಿ ಉಗುರು ಅಥವಾ ಕೂದಲನ್ನು ಕತ್ತರಿಸಿದರೆ ಅಶುಭ ಎಂದು ಹೇಳಲಾಗುತ್ತದೆ. ಅಲ್ಲದೇ ಇದು ಸಾಲಕ್ಕೆ ದಾರಿ ಮಾಡಿಕೊಡಬಹುದು ಎಂದೂ ನಂಬಲಾಗುತ್ತದೆ.

ಬುಧವಾರ: ಬುಧವಾರ ನಿಮ್ಮ ಉಗುರುಗಳನ್ನು ಕತ್ತರಿಸಲು ಒಳ್ಳೆಯ ದಿನವಾಗಿದೆ. ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಿದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಹಾಗೆಯೇ ನಿಮ್ಮ ಬುದ್ಧಿವಂತಿಕೆಗೆ ತಕ್ಕಂತೆ ನೀವು ಹೆಚ್ಚು ಹಣವನ್ನು ಗಳಿಸುತ್ತೀರಿ.

ಗುರುವಾರ: ಗುರುವಾರ ನಿಮ್ಮ ಉಗುರುಗಳನ್ನು ಕತ್ತರಿಸುವುದರಿಂದ ನಿಮ್ಮಲ್ಲಿರುವ ಮಾನವೀಯ ಗುಣಗಳು ಇನ್ನಷ್ಟು ಉತ್ತಮಗೊಳ್ಳುತ್ತವೆ.

ಶುಕ್ರವಾರ: ಈ ದಿನವು ಸುಖ, ಶಾಂತಿ ಹಾಗೂ ಸಂಪತ್ತಿಗೆ ಸಂಬಂಧಿಸಿದ ದಿನವಾಗಿದೆ. ಆದ್ದರಿಂದ ಈ ದಿನ ಉಗುರುಗಳನ್ನು ಕತ್ತರಿಸುವುದು ಶುಭ ಎಂದೇ ಹೇಳಲಾಗುತ್ತದೆ. ಅಲ್ಲದೇ ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದು ನಂಬಲಾಗಿದೆ.

ಶನಿವಾರ: ನಿಮ್ಮ ಉಗುರುಗಳನ್ನು ಕತ್ತರಿಸಲು ನೀವು ಶನಿವಾರವನ್ನು ಪರಿಗಣಿಸಲೇಬಾರದು. ಏಕೆಂದರೆ ಈ ದಿನ ನೀವು ಉಗುರು ಕತ್ತರಿಸುವ ಕೆಲಸ ಮಾಡಿದರೆ ನಿಮ್ಮ ಗ್ರಹಗತಿಯ ಮೇಲೆ ಪರಿಣಾಮ ಬೀರಬಹುದು ಹಾಗೆಯೇ ನಿಮ್ಮ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು.

ಭಾನುವಾರ: ಈ ದಿನ ಸಾಮಾನ್ಯವಾಗಿ ಎಲ್ಲರಿಗೂ ರಜೆ ಇರುವುದರಿಂದ ಇಂಥ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಉಗುರು ಕತ್ತರಿಸುವುದು ನಿಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!