ಬೆಳಗಾವಿ:- ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅವಾಚ್ಯವಾಗಿ ನಿಂದಿಸಿ ವಿಡಿಯೋ ಹರಿಬಿಟ್ಟಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
38 ವರ್ಷದ ಮೋಹಿತ್ ನರಸಿಂಹಮೂರ್ತಿ ಬಂಧಿತ ವ್ಯಕ್ತಿ ಎನ್ನಲಾಗಿದ್ದು, ಈತ ತುಮಕೂರು ಮೂಲದವನಾಗಿದ್ದಾನೆ.
ಘಟನೆ ಸಂಬಂಧ ಸತೀಶ್ ಜಾರಕಿಹೊಳಿ ಬೆಂಬಲಿಗ ವಿಜಯ ತಳವಾರ್ ಎಂಬುವರಿಂದ ಕೇಸ್ ದಾಖಲಾಗಿತ್ತು. ತುಮಕೂರಿನಲ್ಲಿ ಆರೋಪಿಯನ್ನು ಬಂಧಿಸಿ ಬೆಳಗಾವಿಗೆ ಕರೆತಂದ ಪೊಲೀಸರು ಬೆಳಗಾವಿ ಕೋರ್ಟ್ಗೆ ಹಾಜರು ಪಡಿಸಿದ್ದಾರೆ.



