ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ 23ನೇ ವಾರ್ಡಿನಲ್ಲಿ ನಗರಸಭೆಯ ಸದಸ್ಯ ಜನಾಬ ಬರಕತಅಲಿ ಮುಲ್ಲಾ ವಾರ್ಡಿನ ಒಕ್ಕಲಗೇರಿ ಓಣಿಯ ದೇಸಾಯಿ ಪ್ಲಾಟ್‌ನ ಕರಬಿಷ್ಟಿ ಫ್ಯಾಕ್ಟರಿಯಿಂದ ಪುರದರವರ ಮನೆಯವರೆಗಿನ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ವಾರ್ಡಿನ ಮುಖಂಡ ಬಸಪ್ಪ ಗುಗ್ಗರಿ, ವಾರ್ಡಿನ ನಾಗರಿಕರಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ, ರಸ್ತೆಗಳಲ್ಲಿ ಅಗತ್ಯವಿರುವ ಫೆವರ್ಸ್ ಅಳವಡಿಕೆ ಹಾಗೂ ಶೌಚಾಲಯ ವ್ಯವಸ್ಥೆ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಜನಾಬ ಬರಕತಅಲಿ ಮುಲ್ಲಾರವರು ಚಾಲನೆ ನೀಡಿ ಅಭಿವೃದ್ಧಿಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಒಕ್ಕಲಗೇರಿ ಓಣಿಯ ಹಿರಿಯರಾದ ನಾಗಪ್ಪ ಗುಗ್ಗರಿ, ಮುತ್ತಣ್ಣ ರೋಣದ, ಚಂದ್ರಶೇಖರಪ್ಪ ಪುರದ, ಬಸವರಾಜ ಹತ್ತಿಶೆಟ್ಟರ, ಕಾಂಗ್ರೆಸ್ ಮುಖಂಡರಾದ ಜನಾಬ ಎಚ್.ಕೆ. ಮುಲ್ಲಾ, ವಕೀಲ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ, ಜಗದೀಶ ಗೌಡರ, ಮಂಜುನಾಥ ನಲವಡಿ, ಖಾದರ ಕಿರೆಸೂರ, ಆಸಿಫ್ ಅಲಿ ಮುಲ್ಲಾ, ಎಮ್.ಎಮ್. ಕಾಗದಗಾರ, ಶಂಕರಪ್ಪ ಸತ್ಯಪ್ಪನವರ, ಪ್ರಕಾಶ ಕಂಠಿ, ಈರಣ್ಣ ಕರಬಿಷ್ಟಿ, ಖಾದರ ಕಿರೆಸೂರ್, ಹನಮಂತಪ್ಪ ಜಕ್ಕಲಿ, ಸಿದ್ದಲಿಂಗಪ್ಪ ತುರಕಾಣಿ, ಶೇಕಪ್ಪ ತುಪ್ಪದ, ದಾವೂದ ಡೋಲಿ, ಈಶ್ವರಪ್ಪ ಕ್ಯಾಡದ, ಮದಿವಾಳಪ್ಪ ಕಮತರ, ಸತೀಶ ತಡಸದ, ಗೋವಿಂದಪ್ಪ ನಾಗರಾಳ, ಜಗದೀಶ ಸೂರಪ್ಪಗೌಡರ, ಮಹಾಂತೇಶ ನಾಗರಾಳ, ಶಂಕರ ಕರಿಬಿಷ್ಟಿ, ಪ್ರಕಾಶ ಖೋಡೆ ಮುಂತಾದವರಿದ್ದರು.



