ಮಹಿಳೆಯರಿಗೆ ನರ್ಸಿಂಗ್ ಶಿಕ್ಷಣ ನಿಷೇಧ: ತಾಲಿಬಾನ್ ಕ್ರಮಕ್ಕೆ ರಶೀದ್ ಖಾನ್ ಕಿಡಿ!

0
Spread the love

ತಾಲಿಬಾನ್ ವಿರುದ್ಧ ಅಫ್ಘಾನಿಸ್ತಾನ್ ಟಿ20 ತಂಡದ ನಾಯಕ ರಶೀದ್ ಖಾನ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ತಮ್ಮ ದೇಶದ ಮಹಿಳೆಯರಿಗೆ ನರ್ಸಿಂಗ್ ಶಿಕ್ಷಣವನ್ನು ನಿಷೇಧಿಸಿರುವ ತಾಲಿಬಾನ್ ಕ್ರಮವನ್ನು ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಖಂಡಿಸಿದ್ದಾರೆ. ಅಲ್ಲದೇ ತಾಯ್ನಾಡಿನಲ್ಲಿ ಮಹಿಳೆಯರಿಗೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ತಮ್ಮ ಕಳವಳ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ತಾಲಿಬಾನ್ ಸರ್ಕಾರ ಸಚಿವ ಹಿಬತುಲ್ಲಾ ಅಖುಂದ್ಜಾದಾ ಅವರು ಡಿಸೆಂಬರ್ 2 ರಂದು ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವೈದ್ಯಕೀಯ ತರಬೇತಿಯನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ್ದರು.

ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಶೀದ್ ಖಾನ್, ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಆರೋಗ್ಯ ರಕ್ಷಣೆಯಲ್ಲಿ ಮಹಿಳಾ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಶಿಕ್ಷಣ ಎಂಬುದು ಪ್ರತಿಯೊಬ್ಬ ಮುಸ್ಲಿಂ ಪುರುಷ ಮತ್ತು ಮಹಿಳೆಗೆ ಕಡ್ಡಾಯವಾಗಿದೆ. ಆದರೆ ನಮ್ಮ ಸಹೋದರಿಯರಿಗೆ ವೈದ್ಯಕೀಯ ಶಿಕ್ಷಣದ ಬಾಗಿಲು ಮುಚ್ಚಿರುವ ಸುದ್ದಿಯಿಂದ ನಾನು ದುಃಖಿತನಾಗಿದ್ದೇನೆ. ಅಲ್ಲದೆ ಸರ್ಕಾರ ನಡೆಯಿಂದ ನಿರಾಶೆಗೊಂಡಿದ್ದೇನೆ ಎಂದು ರಶೀದ್ ಖಾನ್ ಹೇಳಿದ್ದಾರೆ.

ಅಫ್ಘಾನ್ ಮಹಿಳೆಯರನ್ನು ಶುಶ್ರೂಷಕಿ ಮತ್ತು ನರ್ಸಿಂಗ್ ಕೋರ್ಸ್‌ಗಳಿಂದ ನಿಷೇಧಿಸಿರುವ ನಿಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಯಾರಿಗೂ ಶಿಕ್ಷಣವನ್ನು ನಿರಾಕರಿಸಬಾರದು ಎಂದು ರಶೀದ್ ಖಾನ್ ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here