ಪ್ರೀತಿಗೆ ವಿರೋಧ: ಪ್ರಿಯತಮೆಯ ತಾಯಿ, ಮಗನ ಬರ್ಬರ ಹತ್ಯೆ! ಡಬಲ್ ಮರ್ಡರ್‌ʼಗೆ ಬೆಚ್ಚಿಬಿದ್ದ ಜನತೆ

0
Spread the love

ಬೆಳಗಾವಿ: ಪುತ್ರಿಯ ಪ್ರೀತಿ ವಿರೋಧಿಸಿದ್ದಕ್ಕೆ ತಾಯಿ ಹಾಗೂ ಸಹೋದರನನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ನಡೆದಿದೆ. ಮಂಗಲಾ ನಾಯಕ (45) ಪುತ್ರ ಪ್ರಜ್ವಲ್ ನಾಯಕ್ (18)ಕೊಲೆಯಾದ ಮೃತ ದುರ್ದೈವಿಗಳಾಗಿದ್ದು, ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಚ್ಚಿ ತಾಯಿ ಮಗನ ಭೀಕರ ಕೊಲೆ ಮಾಡಲಾಗಿದೆ.

Advertisement

ಮಂಗಲ್ ಪುತ್ರಿ ಪ್ರಜಕ್ತಾ ಮತ್ತು ರವಿ ಇಬ್ಬರೂ ಪ್ರೀತಿಸುತ್ತಿದ್ದರು. ಪ್ರಜಕ್ತಾ ರವಿ ಇಬ್ಬರೂ ಒಂದೇ ಸಮುದಾಯದಕ್ಕೆ ಸೇರಿದ್ದರೂ ಪ್ರಜಕ್ತಾ ತಾಯಿ ಮದುವೆ ವಿರೋಧಿಸಿದ್ದರು. ಮದುವೆ ನಿರಾಕರಿಸಿದ್ದಕ್ಕೆ ನಿನ್ನೆ ರಾತ್ರಿ ಮನೆಗೆ ಬಂದ ರವಿ ಈ ದುಷ್ಕೃತ್ಯವೆಸಗಿದ್ದಾನೆ.

ಸದ್ಯ ಆರೋಪಿ ರವಿ ಮತ್ತು ಪ್ರೇಯಸಿ ಪ್ರಜಕ್ತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ನಿಪ್ಪಾಣಿ ಆಸ್ಪತ್ರೆ ರವಾನಿ ಸಲಾಗಿದೆ. ನಿಪ್ಪಾಣಿಯಲ್ಲಿ ಪ್ರೀತಿಗಾಗಿ ನಡೆದ ಡಬಲ್ ಮರ್ಡರ್‌ ನಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇನ್ನೂ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here