ಚಿತ್ರದುರ್ಗ:-ಮರಳು ತುಂಬಲು ಹೊರಟಿದ್ದ ಟಿಪ್ಪರ್ ಗಾಡಿಯು ಎತ್ತಿನ ಬಂಡಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಭೈರಾಪುರ ಬಳಿ ಜರುಗಿದೆ.
ಘಟನೆ ಪರಿಣಾಮ, ಸ್ಥಳದಲ್ಲೇ 4 ಎತ್ತುಗಳು, ಹಾಗೂ ಓರ್ವ ಟಿಪ್ಪರ್ ಚಾಲಕ ಸಾವನ್ನಪ್ಪಿದ್ದಾರೆ. ಭೈರಾಪುರ ಬಳಿ ಮರಳು ತುಂಬಲು ಟಿಪ್ಪರ್ ಚಾಲಕ ಹೊರಟಿದ್ದ ವೇಳೆ ವಾಹನದ ನಿಯಂತ್ರಣ ತಪ್ಪಿ ಎತ್ತಿನ ಬಂಡಿಗಳಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಇಮ್ರಾನ್ ಸ್ಥಳದಲ್ಲೇ ಸಾವನ್ನಪ್ಪಿದ ಟಿಪ್ಪರ್ ಚಾಲಕ ಎಂದು ಗುರುತಿಸಲಾಗಿದೆ. ಕೂಡಲೇ ಸ್ಥಳಕ್ಕೆ ಮೊಳಕಾಲ್ಮೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



