ಬಿಮ್ಸ್ ನಲ್ಲಿ ಮತ್ತೆ ಎಡವಟ್ಟು: ಬಾಣಂತಿಯರ ಸರಣಿ ಸಾವಿನ ಬಳಿಕ ಮತ್ತೊಂದು ಸಾವು! ಏನಾಯ್ತು!?

0
Spread the love

ಬಳ್ಳಾರಿ:- ಬಳ್ಳಾರಿ ಬಿಮ್ಸ್​ನಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಮತ್ತೊಂದು ಸಾವು ಸಂಭವಿಸಿದೆ.

Advertisement

ಐವರು ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ವೈದ್ಯರ ನಿರ್ಲಕ್ಷಕ್ಕೆ ಇಂದು ಶಿಶು ಸಾವನ್ನಪ್ಪಿದೆ‌‌. ನಾರ್ಮಲ್ ಹೆರಿಗೆಗೆ ಅಂತಾ ದಾಖಲಾಗಿದ್ದ ಗರ್ಭಿಣಿಗೆ ವೈದ್ಯರು ಏಕಾಏಕಿ ಸಿಜರಿನ್ ಮಾಡಿದ್ದರು ಜೊತೆಗೆ ಮಗು ಕೂಡ ಚೆನ್ನಾಗಿದೆ ಅಂತಾ ಹೇಳಿದ್ರು,

ಆದ್ರೆ ಅರ್ಧ ಗಂಟೆ ಬಿಟ್ಟು ಮಗು ಸಾವಾಗಿದೆ ಅಂತಾ ಹೇಳಿದ್ದಾರೆ ಹೀಗಾಗಿ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿರಗುಪ್ಪ ಬಳಿಯ ಸಿರಗೇರದ ಗಂಗೋತ್ರಿ ಎನ್ನುವರು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಚೆನ್ನಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ರೆ, ಇದಾದ ಅರ್ಧಗಂಟೆಯಲ್ಲಿ ಮಗು ಸಾವನ್ನಪ್ಪಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅಂತ ಶಿಶುವಿನ ಸಂಬಂಧಿಕರು ರೊಚ್ಚಿಗೆದ್ದಾರೆ.

ಗಂಗೋತ್ರಿಗೆ ಈ ಹಿಂದೆ ನಾರ್ಮಲ್ ಡೆಲಿವರಿ ಆಗಿದ್ದರಿಂದ ಈ ಬಾರಿಯೂ ನಾರ್ಮಲ್ ಆಗುತ್ತೆ ಎಂದು ವೈದ್ಯರು ಹೇಳಿದ್ದರು. ತಡ ರಾತ್ರಿಯೇ ಗಂಗೋತ್ರಿಗೆ ಪೇನ್​ ಶುರುವಾಗಿದ್ದು, ಬೆಳಗ್ಗೆ ಒದ್ದಾಡಲು ಆರಂಭಿಸಿದ್ದಾರೆ. ಅಲ್ಲಿತನಕ ಸುಮ್ಮನಿದ್ದ ವೈದ್ಯರು ಕೂಡಲೇ ಸಿಜೆರಿಯನ್ ವಾರ್ಡ್​​ಗೆ ಶಿಫ್ಟ್​ ಮಾಡಿದ್ದಾರೆ. ಬಳಿಕ ಗಂಡು ಮಗು ಜನಿಸಿದ್ದು, ತಾಯಿ-ಮಗು ಆರೋಗ್ಯವಾಗಿದೆ ಅಂತೇಳಿದ್ದಾರೆ. ಇದಾದ ಅರ್ಧಗಂಟೆಯಲ್ಲೇ ಮಗು ಆರೋಗ್ಯದಲ್ಲಿ ಏರುಪೇರಾಗಿ ಸಾವಾಗಿದೆ.

ತಾಯಿ ಗರ್ಭದಲ್ಲಿ ಮಗು ಮಲ ತಿಂದಿದೆ. ಇದರಿಂದ ಶಾಸಕೋಶಕ್ಕೆ ತೊಂದರೆ ಆಗಿ ಮಗು ಮೃತಪಟ್ಟಿದೆ. ಇದರಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ ಎಂದು ವೈದ್ಯರ ಸಬೂಬು. ಇತ್ತ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

LEAVE A REPLY

Please enter your comment!
Please enter your name here