ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಅರೆಸ್ಟ್ – 71 ಲಕ್ಷ ಮೌಲ್ಯದ ಡ್ರಗ್ಸ್ ವಶ

0
Spread the love

ಬೆಂಗಳೂರು: ಹೊಸ ವರ್ಷ‌ ಸಂಭ್ರಮಾಚರಣೆಗೆ ದಿನಗಣನೆ ಶುರುವಾಗಿದೆ. ಆದ್ದರಿಂದ ಡ್ರಗ್ಸ್ ವಿರುದ್ದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೇರಳ ಮೂಲದ ವ್ಯಕ್ತಿ ಸೇರಿ ಇಬ್ಬರು ಡ್ರಗ್​​​ ಪೆಡ್ಲರ್​ಗಳನ್ನು ಅರೆಸ್ಟ್‌ ಮಾಡಿದ್ದಾರೆ. ಆರೋಪಿಗಳಿಂದ 71 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದು,

Advertisement

ಕುಮಾರಸ್ವಾಮಿ ಲೇಔಟ್​ನ ಚಂದ್ರಾನಗರದಲ್ಲಿನ ಮನೆಯೊಂದರಲ್ಲಿ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್​, 520 ಗ್ರಾಂ. ಹೈಡ್ರೋ ಗಾಂಜಾ, 2 ಕೆಜಿ 223 ಗ್ರಾಂ. ಗಾಂಜಾ ಮತ್ತು ತೂಕದ ಯಂತ್ರ, ಮೊಬೈಲ್​ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೇರಳದಿಂದ ಕಡಿಮೆ ಬೆಲೆಗೆ ಮಾದಕ ವಸ್ತುವನ್ನು ತಂದು, ಇಲ್ಲಿ ಮಾರುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಇನ್ನು, ಜೈಲು ಸೇರಿದ ಆರೋಪಿ ಕೂಡ ಇವರ ಸಂಪರ್ಕಕ್ಕೆ ಇದ್ದಾರೆ ಎಂಬ ಅಂಶ ತನಿಖೆ ವೇಳೆ ತಿಳಿದುಬಂದಿದೆ. ಜೈಲಿನಲ್ಲಿರು ಓರ್ವ ಆರೋಪಿಯ ಸೂಚನೆಯಂತೆ ಆರೋಪಿಗಳು ಪೋರ್ಟಲ್​ ಮೂಲಕ ಗಾಂಜಾ ಡೆಲಿವರಿ ಮಾಡುತ್ತಿದ್ದರು. ಸದ್ಯ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 


Spread the love

LEAVE A REPLY

Please enter your comment!
Please enter your name here