HomeGadag Newsಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಆರೋಗ್ಯಕರವಾದ ಜೀವನ ನಡೆಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಆರೋಗ್ಯಕರವಾದ ಜೀವನ ನಡೆಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಿರಿಧಾನ್ಯಗಳು ಕಡಿಮೆ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಬೆಳೆಯುತ್ತಿದ್ದು, ಪೌಷ್ಟಿಕಾಂಶಗಳ ಆಗರವಾಗಿವೆ. ಇವುಗಳ ನಿಯಮಿತವಾದ ಸೇವನೆಯಿಂದ ಈಗಿನ ಜೀವನ ಶೈಲಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಸಕ್ಕರೆ ರೋಗ, ರಕ್ತದೊತ್ತಡ, ಬೊಜ್ಜು ಇತ್ಯಾದಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಹುದು. ಆದ್ದರಿಂದ ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಆರೋಗ್ಯಕರವಾದ ಜೀವನವನ್ನು ನಡೆಸುವಂತೆ ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಕರೆ ನೀಡಿದರು.

ಶುಕ್ರವಾರ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟಿçÃಯ ವಾಣಿಜ್ಯ ಮೇಳ 2024-25ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಕೃಷಿ ಇಲಾಖೆ ಹಾಗೂ ಹುಲಕೋಟಿಯ ಕೆ.ಹೆಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ `ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ (ಐಚಿಟಿಜ ಖಚಿಛಿes Pಡಿoಜuಛಿಣs) ಪಾಕ ಸ್ಪರ್ಧೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸದರಿ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಿಂದ ಒಟ್ಟು ೫೯ ಮಹಿಳೆಯರು ವೈವಿಧ್ಯಮಯ ಹಾಗೂ ರುಚಿಕರವಾದ ವಿವಿಧ ಸಿರಿಧಾನ್ಯದ ಹಾಗೂ ಮರೆತುಹೋದ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಪ್ರದರ್ಶಿಸಿದ್ದರು.

ಸಿರಿಧಾನ್ಯದ ಸಿಹಿ ಖಾದ್ಯಗಳಲ್ಲಿ ವಿವಿಧ ಪಾಯಸಗಳು, ಹೋಳಿಗೆಗಳು, ಲಾಡುಗಳು, ಹಲ್ವಾ, ಕೇಕ್, ಹಾಲುಬಾಯಿ, ಕಡುಬು ಮತ್ತು ಮಾಲ್ದಿ ಇತ್ಯಾದಿಗಳನ್ನು ರುಚಿಕರವಾಗಿ ತಯಾರಿಸಿ, ಆಕರ್ಷಕವಾಗಿ ಪ್ರದರ್ಶಿಸಿದ್ದರು. ಹಾಗೆಯೇ ಸಿರಿಧಾನ್ಯದ ಖಾರದ ಖಾದ್ಯಗಳಲ್ಲಿ ರುಚಿಕರವಾದ ವಡೆಗಳು, ನುಚ್ಚು, ಅಂಬಲಿ, ಹಪ್ಪಳ, ಚಕ್ಕುಲಿ, ಕಿಚಡಿ, ರೋಲ್ಸ್, ರೊಟ್ಟಿಗಳು, ತಾಲಿಪಟ್ಟುಗಳು, ಎಣ್ಣೆಗಡುಬು, ಪಲಾವ್, ದೋಸೆ , ಮಾಲ್ಟ್ ಇತ್ಯಾದಿಗಳು ನೋಡುಗರನ್ನು ಸವಿಯಲು ಕೈ ಬೀಸಿ ಕರೆಯುತ್ತಿದ್ದವು. ಇವುಗಳಲ್ಲದೇ, ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಪೌಷ್ಟಿಕವಾದ ಗುಳ್ಳಡಿಕೆ ಉಂಡಿ, ಹೊಂಬಾಳೆ ವಡೆ, ಹಲಸಿನ ಎಲೆ ಇಡ್ಲಿ, ಕೇಸುವಿನ ಗಡ್ಡೆಯ ಕಟ್ಲೆಟ್ ಇತ್ಯಾದಿಗಳು ಬಾಯಲ್ಲಿ ನೀರೂರಿಸುವಂತಿದ್ದವು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಸುಧಾ ಮಂಕಣಿ, ಉಪ ಕೃಷಿ ನಿರ್ದೇಶಕರಾದ ಸ್ಫೂರ್ತಿ ಜಿ.ಎಸ್ ನಿರ್ಣಾಯಕರಾಗಿ ಭಾಗವಹಿಸಿದ್ದರು.

ಸಿರಿಧಾನ್ಯದ ಸಿಹಿ ಖಾದ್ಯಗಳು, ಸಿರಿಧಾನ್ಯದ ಖಾರದ ಖಾದ್ಯಗಳು ಹಾಗೂ ಮರೆತು ಹೋದ ಖಾದ್ಯಗಳ ಮೂರೂ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದವರು ಜನೆವರಿ-೨೫ರಲ್ಲಿ ಏರ್ಪಡಿಸುವ ರಾಜ್ಯಮಟ್ಟದ ಸಿರಿಧಾನ್ಯದ ಪಾಕ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲು ತಿಳಿಸಲಾಯಿತು.  ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸೀಮಾ ಸವಣೂರ, ಮಂಜುನಾಥ ಭರಮಗೌಡರ, ಕೆ.ಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

 

  • ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿ, ಸ್ಪರ್ಧೆಯಲ್ಲಿ ಎಲ್ಲರೂ ಅತಿ ಉತ್ಸಾಹದಿಂದ ಭಾಗವಹಿಸಿರುವುದು ತುಂಬಾ ಸಂತೋಷಕರವಾಗಿದೆ. ಎಲ್ಲಾ ಖಾದ್ಯಗಳು ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಎಲ್ಲ ಖಾದ್ಯಗಳೂ ಬಹುಮಾನ ಪಡೆಯಲು ಅರ್ಹತೆ ಇರುವಂತಹ ಖಾದ್ಯಗಳೇ ಆಗಿವೆ ಎಂದು ಅಭಿಪ್ರಾಯಪಟ್ಟರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!