ಜ.14,15ರಂದು ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ `ಸಿದ್ಧಶ್ರೀ ರಾಷ್ಟ್ರೀಯ ಉತ್ಸವ-2024

0
Spread the love

ವಿಜಯಸಾಕ್ಷಿ ಸುದ್ದಿ, ಬಾಗಲಕೋಟ: ಇಲ್ಲಿನ  ಐಹೊಳೆ ಹತ್ತಿರದ ಉತ್ತರ ಕರ್ನಾಟಕದ ಹೆಮ್ಮೆಯ ಕಲಾಪೋಷಕರ ಮಠ, ಸುಕ್ಷೇತ್ರ ಸಿದ್ಧನಕೊಳ್ಳದ `ಸಿದ್ಧಶ್ರೀ ರಾಷ್ಟ್ರೀಯ ಉತ್ಸವ-2024 ಜನವರಿ 14, 15ರಂದು ಜರುಗಲಿದ್ದು, ಜ.14ರಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ, ಜ.15 ರಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ ಎಂದು ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಸಿದ್ಧಶ್ರೀ ಉತ್ಸವದಲ್ಲಿ ಸಹಸ್ರಾರು ಭಕ್ತರು ಸೇರುತ್ತಿದ್ದು, ಸಂಗೀತ, ನೃತ್ಯ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನೆರವೇರುತ್ತವೆ. ರಾಜ್ಯ, ಹೊರರಾಜ್ಯಗಳ ವಿವಿಧ ಸಾಧಕರು, ಪ್ರತಿಭಾನ್ವಿತ ಉದಯೋನ್ಮುಖ ಕಲಾ ಪ್ರತಿಭೆಗಳಿಗೂ ವೇದಿಕೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ. ಚಿತ್ರೋತ್ಸವದ ಆಯ್ಕೆ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಚಲನಚಿತ್ರ ಪತ್ರಕರ್ತರಾದ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಜೂನಿಯರ್ ಉಪೇಂದ್ರ ವೀರೇಶ ಪುರವಂತ, ಚಲನಚಿತ್ರ ಕಲಾವಿದ ಸಂಗನಗೌಡ್ರು ಕುರುಡಗಿ, ಚಲನಚಿತ್ರ ಛಾಯಾಗ್ರಾಹಕ ಶಿವಶರಣ ಸುಗ್ನಳ್ಳಿ, ಚಲನಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಲೋಕೇಶ ವಿದ್ಯಾಧರ, ಚಲನಚಿತ್ರ ಮತ್ತು ಕಿರುತೆರೆ ಕಲಾವಿದೆ ಸುನಂದಾ ಕಲ್ಬುರ್ಗಿ, ಭರತನಾಟ್ಯ ಕಲಾವಿದೆ ಕೃತ್ತಿಕಾ ಕಾರ್ಯ ನಿರ್ವಹಿಸಲಿದ್ದಾರೆ.

ಆಸಕ್ತರು ಡಿಸೆಂಬರ್ 31ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ನಂತರ ಬಂದವರಿಗೆ ಅವಕಾಶವಿಲ್ಲ. ಶ್ರೀಗಳ ಮತ್ತು ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ. ಆಯ್ಕೆಯಾದವರಿಗೆ ನಂತರ ತಿಳಿಸಲಾಗುತ್ತದೆ. ತಮ್ಮ ಟೀಸರ್, ಟ್ರೇಲರ್, ಪೋಸ್ಟರ್‌ಗಳನ್ನು ಡಾ.ಪ್ರಭು ಗಂಜಿಹಾಳ, ವಾಟ್ಸಪ್ ನಂ-9448775346 ಇಲ್ಲಿಗೆ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಲನಚಿತ್ರೋತ್ಸವ ವಿಭಾಗದ ಡಾ.ವೀರೇಶ ಹಂಡಿಗಿ-ಮೊ. 9060933596, ವೀರೇಶ ಐಹೊಳೆ-ಮೊ. 7026062364, ಸಂಗನಗೌಡ್ರು ಕುರುಡಗಿ-ಮೊ. 8861811128 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಇನ್ನೂ ಬಿಡುಗಡೆಯಾಗದ ೨೦೨೪ರಲ್ಲಿ ನಿರ್ಮಾಣವಾದ, ಆಗುತ್ತಿರುವ ಹೊಸ ಚಲನಚಿತ್ರಗಳ, ಟೆಲಿಫಿಲ್ಮ್, ಕಿರುಚಿತ್ರಗಳ, ಟ್ರೈಲರ್, ಟೀಸರ್ ಮತ್ತು ಪೋಸ್ಟರಗಳನ್ನು ಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಬಹುದು. ಯಾವುದೇ ಪ್ರವೇಶ ಶುಲ್ಕಗಳಿಲ್ಲದೆ ಉಚಿತ   ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಚಲನಚಿತ್ರದ ತಂಡಗಳಿಗೆ ಅಭಿನಂದನಾ ಪತ್ರ, ನೆನಪಿನ ಸ್ಮರಣಿಕೆ, ಕಿರುಚಿತ್ರ ತಂಡಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಗುತ್ತದೆ.


Spread the love

LEAVE A REPLY

Please enter your comment!
Please enter your name here