ಬೆಂಗಳೂರು:-ಕಚ್ಚಿತ್ತೆಂದು ಸಾಕು ನಾಯಿಯನ್ನೇ ಕೋಲಿನಿಂದ ಹೊಡೆದು ಮಾಲೀಕ ಕೊಂದಿರುವ ಘಟನೆ ನಗರದ ಪುಟ್ಟೇನಹಳ್ಳಿಯಲ್ಲಿ ಜರುಗಿದೆ.
Advertisement
ನಾಯಿ ಮಾಲೀಕ ಕರಣ್ನಿಂದ ಕೃತ್ಯವೆಸಗಲಾಗಿದೆ. ಮಾಲೀಕ ಕರಣ್ ನಿತ್ಯ ಬೆಳಗ್ಗೆ ಸಾಕು ನಾಯಿ ರಾಟ್ ವಿಲ್ಲರ್ ವಾಕಿಂಗ್ಗೆ ಕರೆದೊಯ್ಯುತ್ತಿದ್ದರು. ಇಂದು ಬೆಳಗ್ಗೆ ಕೂಡ ವಾಕಿಂಗ್ಗೆ ಕರೆದುಕೊಂಡು ಹೋಗುವಾಗ ಮಾಲೀಕನಿಗೆ ಶ್ವಾನ ಕಚ್ಚಿದೆ. ಈ ವೇಳೆ ಕೈಯಲ್ಲಿದ್ದ ಕೋಲಿನಿಂದ ನಾಯಿಯನ್ನು ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಕರಣ್ ವಿರುದ್ಧ ಕೇಸ್ ದಾಖಲಾಗಿದೆ.