ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ದಕ್ಷಿಣ ಕಾಶಿ ಜಲಾಶಂಕರದಲ್ಲಿ ಗುರುವಾರ ಬೆಳಿಗ್ಗೆ ಜಲಾಶಂಕರನಿಗೆ ಮಹಾರುದ್ರಾಭಿಷೇಕ, 1008 ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿತು. ಈ ಪೂಜಾ ವಿಧಿ-ವಿಧಾನವನ್ನು ಅರ್ಚಕರಾದ ಮಲ್ಲಯ್ಯಸಾಮಿ ಅಂಗಡಿ (ಹಿರೇಮಠ) ನೆರವೇರಿಸಿದರು. ಭಕ್ತಿ ಸೇವೆಯನ್ನು ಶ್ರೀಕಾಂತಸಾ ಮೇರವಾಡೆ ಕುಟುಂಬದವರು ವಹಿಸಿಕೊಂಡಿದ್ದರು.
ಸಾಯಂಕಾಲ 6.30ಕ್ಕೆ ದೀಪೋತ್ಸವ ಕಾರ್ಯಕ್ರಮಕ್ಕೆ ಮಾತೋಶ್ರೀ ರುದ್ರಮ್ಮ ತಾಯಿ ಮತ್ತು ಜಲಾಶಂಕರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಣೇಶ ಪಾಂಡಪ್ಪ ಲಮಾಣಿ ಚಾಲನೆ ನೀಡಿದರು. ನಂತರ ಮಾತೋಶ್ರೀ ರುದ್ರಮ್ಮ ತಾಯಿಯವರು ದೀಪೋತ್ಸವ ಕುರಿತು ಆಶೀರ್ವಚನ ನೀಡಿದರು.
ಈ ದೀಪೋತ್ಸವ ಕಾರ್ಯಕ್ರಮದಲ್ಲಿ ಎಸ್.ಎಸ್. ಹುಣಶೀಮರದ ಕುಟುಂಬದವರು, ಈರಣ್ಣ ಭಜಂತ್ರಿ, ಡಾ. ರಾಜಶೇಖರ ಬಳ್ಳಾರಿ, ವಿಷ್ಣು ಕಲಘಟಗಿ, ಶಿದ್ಲಿಂಗಯ್ಯ ಬೆನಕಲ್‌ಮಠ, ಬಸವರಾಜ ಹರ್ತಿ, ಸೋಮಶೇಖರಸ್ವಾಮಿ ಚಪ್ಪನಮಠ, ರವಿ ಚವ್ಹಾಣ, ಸುರೇಶ ಭೋಜಪ್ಪ ಗುಡಿಮನಿ, ರಾಘವೇಂದ್ರಸಾ ಮೇರವಾಡೆ, ಸುಗೀರಯ್ಯ ಅರಿಕೇರಿಮಠ, ಸಿದ್ಲಿಂಗೇಶ ಮೂರಶಿಳ್ಳಿನ, ಹಳ್ಳಿ ಕುಟುಂಬದವರು, ನಡುವಲಗುಡ್ಡ ಕುಟುಂಬದವರು, ನಿರ್ಮಲ ಪವಾರ, ನಾಗಪ್ಪ ಇನಾಮತಿ, ರೇವಣಸಿದ್ದಯ್ಯ ಬರದೂರಮಠ, ಸಂತೋಷ ಹಿರೇಮಠ ಹಾರೂಬೆಳವಡಿ, ಶಂಕರಗೌಡ ಭರಮಗೌಡ್ರ ಸೇರಿದಂತೆ ಸುತ್ತ-ಮುತ್ತಲಿನ ಭಕ್ತಾಧಿಗಳು ಪಾಲ್ಗೊಂಡಿದ್ದರು.