ಕಲಬುರ್ಗಿ:- ಕಲಬುರಗಿ ಸೆಂಟ್ರಲ್ ಜೈಲಿನ ಕರ್ಮಕಾಂಡ ಇಂಚಿಂಚೂ ಬಯಲಾಗಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯವೇ ನಡೆಯುತ್ತಿದೆ. ಜೈಲಿನಲ್ಲೇ ಕೈದಿಗಳು ಎಣ್ಣೆ ಪಾರ್ಟಿ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ರಾಶಿ ರಾಶಿ ಸ್ಮಾರ್ಟ್‌ಫೋನ್‌ಗಳು, ಬೀಡಿ-ಸಿಗರೇಟ್ ಪ್ಯಾಕೇಟ್‌ಗಳನ್ನ ಒಂದೇಡೆ ಹಾಕಿರುವ ವೀಡಿಯೋ ಕೂಡ ವೈರಲ್ ಆಗಿದೆ. ಜೈಲ್ ಅಧೀಕ್ಷಕಿಯನ್ನ ಟಾರ್ಗೆಟ್ ಮಾಡಿಕೊಂಡು ವೀಡಿಯೋ ರಿಲೀಸ್ ಮಾಡಲಾಗಿದೆ. ಜೈಲು ಮುಖ್ಯ ಅಧೀಕ್ಷಕಿಗೆ ಹಣ ನೀಡುವ ಕುರಿತು ಕೈದಿಗಳು ಮಾತುಕತೆ ನಡೆಸಿರುವುದು ಇದರಿಂದ ಬಹಿರಂಗಗೊಂಡಿದೆ.
ಶಂಕಿತ ಉಗ್ರ ಜುಲ್ಫಿಕರ್, ಶಿವಮೊಗ್ಗ ರೌಡಿಶೀಟರ್ ಬಚ್ಚನ್ ಸೇರಿ ಆರು ನಟೋರಿಯಸ್ ಕೈದಿಗಳ ಶಿಫ್ಟ್ ಬೆನ್ನಲ್ಲೇ ಜೈಲಿನಲ್ಲಿನ ಮತ್ತಷ್ಟು ವೀಡಿಯೋ ವೈರಲ್ ಆಗಿವೆ. 2 ತಿಂಗಳ ಹಿಂದಿನ ವೀಡಿಯೋ ಇದು ಎನ್ನಲಾಗಿದೆ.
ಅ.14 ರಂದು ಜೈಲು ಮುಖ್ಯ ಅಧೀಕ್ಷಕಿಯಾಗಿ ಡಾ.ಅನಿತಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅ.16 ರಿಂದ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಜೈಲ್ ಸುಪರಿಂಟೆಂಡೆಂಟ್ ಮುಂದಾಗಿದ್ದರು
ಅ.16 ದಿನಾಂಕ ಕಾಣುವಂತೆ ದಿನಪತ್ರಿಕೆಯಲ್ಲಿ ದಿನಾಂಕ ತೋರಿಸಿ ಹಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಅ.29 ರಂದು ರಾಶಿ ರಾಶಿ ಗುಟ್ಕಾ, ಬೀಡಿ, ಸಿಗರೇಟ್ ಗುಡ್ಡೆ ಹಾಕಿ ವೀಡಿಯೋ ಮಾಡಲಾಗಿದೆ. ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದ ಅಧೀಕ್ಷಕಿ ಅನೀತಾರನ್ನ ಟಾರ್ಗೆಟ್ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.