ಬಳ್ಳಾರಿ: ಬಳ್ಳಾರಿಯಲ್ಲಿ ಬಾಣಂತಿಯರು ಸಾಯುತ್ತಿದ್ದರೆ ಸಿದ್ದರಾಮಯ್ಯ ಸರ್ಕಾರ ಸಮಾವೇಶ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಆರೋಪಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯಾವ ಪುರಷಾರ್ಥಕ್ಕಾಗಿ ಜನಕಲ್ಯಾಣ ಸಮಾವೇಶ ನಡೆಸಿದೆ ಎಂದು ಪ್ರಶ್ನಿಸಿದ್ದಾರೆ.
Advertisement
ಇನ್ನೂ ಬಳ್ಳಾರಿಯ ಬಿಮ್ಸ್ನಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ, ಅವರ ಗೋಳು ಕೇಳಲು ಸರ್ಕಾರದ ಮಂತ್ರಿಗಳ್ಯಾರೂ ಬರಲ್ಲ, ಅವರಿಗೆ ಪರಿಹಾರ ನೀಡಲ್ಲ, ಅದರೆ ಸಮಾವೇಶವನ್ನು ಅದ್ದೂರಿಯಾಗಿ ಮಾಡುತ್ತಾರೆ, ತನಗೆ ಎಷ್ಟೆಲ್ಲ ಜನ ಬೆಂಬಲವಿದೆ ಅಂತ ಈಡಿ ಮತ್ತು ಸಿಬಿಐಗೆ ತೋರಿಸಿ ಹೆದರಿಸಲು ಸಿದ್ದರಾಮಯ್ಯ ಸಮಾವೇಶ ಮಾಡಿರುವಂತಿದೆ ಎಂದು ಹೇಳಿದ್ದಾರೆ.