ವಿಜಯಸಾಕ್ಷಿ ಸುದ್ದಿ, ಗದಗ: ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಂಸ್ಥೆ (ಸಿರ್ಡಾ) ಗದಗ ಹಾಗೂ ಸರ್ವೋದಯ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಗದಗ ವತಿಯಿಂದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚಿಗೆ ನಗರದ ಜಿ.ಎಸ್. ಪಾಟೀಲ ಬಡಾವಣೆಯಲ್ಲಿಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಷ.ಬ್ರ.ಶ್ರೀ ಫಕ್ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎನ್ನುವುದಕ್ಕೆ ಈ ಸಂಸ್ಥೆ ಸಾಕ್ಷಿಯಾಗಿದೆ. ಸಂಸ್ಥೆಯು 18ನೇ ವರ್ಷ ಪೂರೈಸಿ ಮಹಿಳೆಯರ ಅಭಿವೃದ್ಧಿಯೊಂದಿಗೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಹೆಮ್ಮರವಾಗಿ ಬೆಳೆದು ಜನಸೇವೆ ಮಾಡುತ್ತಿರುವುದು ಶ್ಲಾಘನೀಯ. ಗ್ರಾಮೀಣ ಅಭಿವೃದ್ಧಿಯಲ್ಲಿ ಸಂಸ್ಥೆಯು ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸಂಸ್ಥೆಯು ಮಹಿಳೆಯರ ಸ್ವಾವಲಂಬನೆಗಾಗಿ ಸ್ವಯಂ ಉದ್ಯೋಗ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಮಹಿಳೆಯರ ಸಶಕ್ತೀಕರಣಕ್ಕೆ ಒತ್ತು ಕೊಡಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಪ್ರಮುಖರಾದ ಲಲಿತಾ ಬಿ.ಅಸೂಟಿ, ಡಾ. ಎಂ.ಜೆ. ಜೇವಣ್ಣವರ, , ರಮಾಕಾಂತ ಎ.ಕುಲಕರ್ಣಿ, ಬಿ.ಬಿ. ಅಸೂಟಿ, ವಿದ್ಯಾಧರ ದೊಡ್ಡಮನಿ, ಡಾ. ಎಲ್.ಜಿ. ಹಿರೇಗೌಡರ, ಕೆ.ಎಸ್. ಮಾಶೆಟ್ಟಿ, ನೀಲಮ್ಮ ಬೋಳನವರ, ಬಸವರಾಜ ನರೇಗಲ್ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಾಧನೆಗೈದ ಡಾ. ಎಂ.ಜೆ. ಜೇವಣ್ಣವರ, ಡಾ. ಎಲ್.ಜಿ. ಹಿರೇಗೌಡರ, ಪ್ರಕಾಶ ಸಂಘಮಿತ್ರ, ರೇಖಾ ಪೂಜಾರ, ಲಲಿತಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಗಮ್ಮ ಅಂಬಿಗೇರ ಸ್ವಾಗತಿಸಿದರು. ಶ್ರೀದೇವಿ ಶಿಶ್ವಿನಹಳ್ಳಿ ಪ್ರಾರ್ಥಿಸಿದರು. ವೆಂಕಟೇಶ ನಿರೂಪಿಸಿದರು. ರೇಖಾ ಪೂಜಾರ ವಂದನಾರ್ಪಣೆಗೈದರು.



