ನಿರಂತರವಾಗಿ ಶ್ರಮವಹಿಸಿದಲ್ಲಿ ಟಿಬಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತದಲ್ಲಿ ದಿನೇ ದಿನೇ ಟಿಬಿ ರೋಗವು ಉಲ್ಬಣಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಸರ್ಕಾರವು ಅನೇಕ ಯೋಜನೆಗಳನ್ನು ಕೈಗೊಂಡಿದೆ. ಟಿಬಿ ಮುಕ್ತ ಭಾರತವನ್ನಾಗಿ ಮಾಡಲು ಸಂಬಂಧಪಟ್ಟ ಸಿಬ್ಬಂದಿಯವರ ಶ್ರಮ ಶ್ಲಾಘನೀಯ. ಮುಂದಿನ ದಿನಮಾನಗಳಲ್ಲಿ ಇದೇ ರೀತಿ ನಿರಂತರವಾಗಿ ಶ್ರಮವಹಿಸಿದಲ್ಲಿ ಟಿಬಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ ಎಂದು ಕಾನೂನು, ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.

Advertisement

ಇಲ್ಲಿನ ಡಿಜಿಎಂ ಆಯುರ್ವೇದಿಕ್ ಕಾಲೇಜಿನಲ್ಲಿ ಶನಿವಾರ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷಯರೋಗದ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರೂ ಟಿಬಿ ಮುಕ್ತ ಭಾರತ ಪ್ರಮಾಣವಚನವನ್ನು ಸ್ವೀಕರಿಸಿದರು.

ಜೈ ಭೀಮ ಕಲಾ ತಂಡದವರು ಕ್ಷಯರೋಗ ಕುರಿತು ಅರಿವು ಮೂಡಿಸುವ ಜಾನಪದ ಹಾಡುಗಳನ್ನು ಹಾಡಿದರು. ಮುಂಜಾನೆ ವಿದ್ಯಾರ್ಥಿಗಳಿಂದ ಜಾಥಾ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಅರುಂಧತಿ ಕೆ., ತಾಲೂಕಾ ಆರೋಗ್ಯಾಧಿಕಾರಿ ಡಾ.ಸಂತೋಷ್ ಬೆಳವಡಿ, ಡಾ. ಪ್ರೀತ ಖೋನಾ, ಇಂಡಿಯನ್ ರೆಡ್ ಕ್ರಾಸ್ ಗದಗ ಕಾರ್ಯದರ್ಶಿ ಡಾ. ಸಾಮುದ್ರಿ, ಡಾ. ಮಹ್ಮದ್‌ಅಶ್ರಫ್‌ಉಲ್, ರೂಪಸೇನ್ ಚವ್ಹಾಣ, ಡಿ.ಜಿ.ಎಂ. ಕಾಲೇಜಿನ ಕಾರ್ಯದರ್ಶಿ ಡಾ. ಬಿಎಸ್. ಪಾಟೀಲ, ವಿಶ್ವ ಆರೋಗ್ಯ ಸಲಹೆಗಾರ ಡಾ. ಸತೀಶ್ ಘಾಟಗೆ, ಗದಗ ತಾಲೂಕಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ತಹಸೀಲ್ದಾರ ಶ್ರೀನಿವಾಸ ಮೂರ್ತಿ ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಹಾಗೂ ಎನ್.ಟಿ.ಇ.ಪಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಎಲ್ಲ ಸಿಬ್ಬಂದಿಗಳು ಅಭಿಯಾನವನ್ನು ಯಶಸ್ವಿಗೊಳಿಸಿ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕೆAದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here