ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರವೇ ಬೆಳಗಾವಿಗೆ ಶಿಪ್ಟ್ ಆಗಿದೆ. ಈ ಬಾರಿ ದುಂದುವೆಚ್ಚ ಮಾಡದಂತೆ ಅಚ್ಚುಕಟ್ಟಾಗಿ ಅಧಿವೇಶನ ಮಾಡಲು ಕಳೆದ ಎರಡು ವಾರದಿಂದ ಬೆಳಗಾವಿ ಜಿಲ್ಲಾಡಳಿತ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಇನ್ನು ವಿಧಾನಸಭೆ ಕಲಾಪವನ್ನು ವಂದೇ ಮಾತರಂ ಗೀತೆಯ ಮೂಲಕ ಕಲಾಪ ಆರಂಭಿಸಲಾಯಿತು.
Advertisement
ಇನ್ನೂ ವಿಧಾನ ಸಭೆಗೆ ಆಯ್ಕೆಯಾಗಿರುವ ಮೂವರು ಶಾಸಕರು ಇಂದು ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೈಯಲ್ಲಿ ಸಂವಿಧಾನ ಹಿಡಿದು ಸಂಡೂರು ಕ್ಷೇತ್ರದ ಅನ್ನಪೂರ್ಣಮ್ಮ, ಚನ್ನಪಟ್ಟಣ ಕ್ಷೇತ್ರದ ಯೋಗೇಶ್ವರ್ ಮತ್ತು ಶಿಗ್ಗಾಂವ್ ನ ಯಾಸೀರ್ ಪಠಾಣ್ ಪ್ರಮಾಣ ವಚನ ಸ್ವೀಕರಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಡಿಸೆಂಬರ್ 20ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ.