ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದಿಂದ ಎಸ್ಎಸ್ಕೆ ಸಮಾಜವು ಇದುವರೆಗೂ ಯಾವುದೇ ಸೌಲಭ್ಯ ಪಡೆದಿಲ್ಲ. ರಾಜ್ಯಾದ್ಯಂತ ಸಮಾಜದ ಸುಮಾರು ಶೇ. ೮೦ರಷ್ಟು ಜನ ಆರ್ಥಿಕವಾಗಿ ಹಿಂದುಳಿದಿದ್ದಾರೆ. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಬಯಸಿದ್ದರು. ಆದರೆ, ಅಂದು ನಮ್ಮ ಸಮುದಾಯದ ಹಿರಿಯರು ಮಾಡಿದ ತಪ್ಪಿನಿಂದಾಗಿ ನಾವು ಇದುವರೆಗೂ ಶಿಕ್ಷೆ ಅನುಭವಿಸುತ್ತಿದ್ದು, ಎಸ್.ಟಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಡಿಸೆಂಬರ್ 11ರಂದು ಬೆಳಗಾವಿ ಚಲೋ ಹಮ್ಮಿಕೊಂಡಿದ್ದೇವೆ ಎಂದು ಎಸ್ಎಸ್ಕೆ ಹೋರಾಟ ಸಮಿತಿ ಅಧ್ಯಕ್ಷ ಪಾಂಡುರಂಗಸಾ ಹೇಳಿದರು.
ಸೋಮವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಎಸ್ಕೆ ಸಮಾಜವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಚುನಾವಣೆ ಸಮಯದಲ್ಲಿ ನಾನಾ ಆಮಿಷ ತೋರಿಸಿ ಲಾಭ ಪಡೆಯುತ್ತಾರೆ. ಆದರೆ, ಚುನಾವಣೆ ಮುಗಿದ ನಂತರ ನಮ್ಮನ್ನು ಮರೆಯುತ್ತಾರೆ. ವಿಧಾನಸಭೆ, ವಿಧಾನ ಪರಿಷತ್ನಲ್ಲಿ ನಮ್ಮ ಸಮುದಾಯದ ಯಾವುದೇ ನಾಯಕರಿಲ್ಲ. ನಮ್ಮನ್ನು ಶಾಸಕರನ್ನಾಗಿ ಮಾಡಿ ಎಂದು ಕೇಳುತ್ತಿಲ್ಲ. ಬದಲಾಗಿ ಎಸ್ಎಸ್ಕೆ ಸಮಾಜವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇಡುತ್ತಿದ್ದೇವೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೇಣುಕಾ ಕಲಬುರ್ಗಿ, ಸ್ನೇಹಲತಾ ಕಬಾಡಿ, ನಾರಾಯಣ ನಿರಂಜನ್, ಫಕ್ಕಿರಸಾ ಬಾಂಡಗೆ, ಶಂಕರಸಾ ಕಲಬುರ್ಗಿ, ಸಂಜೀವ್ ಕಟವಟೆ, ಮಾಧುಸಾ ಮೆರವಾಡೆ, ಬಿ.ಎನ್. ಹಬೀಬ, ಕಾಶಾನಾಥಸಾ ಸಿದ್ಲಿಂಗ, ಶ್ರೀಕಾಂತಸಾ ಬಾಬಾಸಾ, ಗುರುನಾಥ ಹಬೀಬ, ಉಮಾ ಶಂಕರಸಾ ಬೇವಿನಕಟ್ಟಿ, ರಾಘವೇಂದ್ರ ಕಬಾಡಿ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಎಲ್ಲ ಸಮುದಾಯಗಳ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಜೊತಗೆ, ಸರ್ಕಾರಿ ರಜೆಗಳನ್ನು ನೀಡುತ್ತಿದ್ದು, ಎಸ್ಎಸ್ಕೆ ಸಮಾಜವು ಸಹಸ್ರಾರ್ಜುನ ಜಯಂತಿ ಆಚರಿಸುವಾಗ ಸರ್ಕಾರದಿಂದ ನಮಗೆ ಯಾವುದೇ ಸಹಾಯ, ಸೌಲಭ್ಯ ಸಿಗುತ್ತಿಲ್ಲ. ಸಮುದಾಯಕ್ಕೆ ನಿಗಮ ಮಂಡಳಿ ನಿರ್ಮಿಸಿ ವರ್ಷಕ್ಕೆ 200ಕೋಟಿ ರೂ ಮೀಸಲಿಡಬೇಕು ಹಾಗೂ ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಿಸಬೇಕು ಎಂದು ಪಾಂಡುರಂಗಸಾ ಸರ್ಕಾರವನ್ನು ಆಗ್ರಹಿಸಿದರು.