ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರೈತರ ಮುಂಗಾರಿನ ಆಶಾದಾಯಕ ವಾಣಿಜ್ಯ ಬೆಳೆ ಗೆಜ್ಜೆಶೇಂಗಾ ಬೆಲೆಯಲ್ಲಿ ಇದೀಗ ದಿನೇದಿನೇ ಕುಸಿತ ಕಾಣುತ್ತಿದ್ದು, ಶೇಂಗಾ ಬೆಳೆದ ರೈತ ಸಮುದಾಯವನ್ನು ನಿರಾಸೆ ಕಾಡತೊಡಗಿದೆ.
ಮುಂಗಾರಿನಲ್ಲಿ ಮಳೆ ಕೊರತೆಯಿಂದ ಶೇಂಗಾ ಇಳುವರಿ ಕುಂಠಿತಗೊAಡಿದ್ದು, ಹರಸಾಹಸ ಪಟ್ಟು ಉಳಿಸಿಕೊಂಡು ಬೆಳೆಗೀಗ ಬೆಲೆ ಇಲ್ಲದಂತಾಗಿ ನಷ್ಟ-ಕಷ್ಟ ಅನುಭವಿಸುವಂತಾಗಿದೆ. ಪ್ರಸಕ್ತ ಹಂಗಾಮಿಗೆ ಲಕ್ಷೆö್ಮÃಶ್ವರ ಸೇರಿ ತಾಲೂಕಿನ ಅಕ್ಕಿಗುಂದ, ಬಟ್ಟೂರ, ಬಡ್ನಿ, ಸೂರಣಗಿ, ಬಾಲೆಹೊಸೂರ, ರಾಮಗೇರಿ, ಬಸಾಪುರ, ಯಳವತ್ತಿ, ಯತ್ನಳ್ಳಿ, ಅಡರಕಟ್ಟಿ, ಗೊಜನೂರ ಸೇರಿ7200 ಹೆಕ್ಟೇರ್ ಜಮೀನಿನಲ್ಲಿ ಶೇಂಗಾ ಬಿತ್ತನೆಯಾಗಿದೆ.
ಸಕಾಲಿಕ ಮಳೆಯಾಗದೇ ಪ್ರತಿ ಎಕರೆಗೆ ಸರಾಸರಿ 15-20 ಚೀಲ ಬೆಳೆಯುವ ರೈತರು 5ರಿಂದ 10 ಚೀಲ ಬೆಳೆದಿದ್ದಾರೆ. ಈಗ ಬೆಲೆಯೂ ಕುಸಿತವಾಗಿರುವುದು ರೈತರ ಸಂಕಷ್ಟಕ್ಕೆ ಕೊನೆ ಇಲ್ಲದಂತಾಗಿದೆ. ನವಂಬರ್ ತಿಂಗಳು ಶೇಂಗಾ ಬೆಳೆ ಮಾರುಕಟ್ಟೆಗೆ ಬಂದ ಸಂದರ್ಭದಲ್ಲಿ ಪ್ರತಿ ಕ್ವಿಂಟಲ್‌ಗೆ ಕನಿಷ್ಟ 3 ಸಾವಿರ, ಸರಾಸರಿ 5 ಸಾವಿರ ಗರಿಷ್ಠ 6500 ರೂ.ವರೆಗೂ ಮಾರಾಟವಾಗಿತ್ತು. ಇದೀಗ ಅದೇ ಬೆಳೆಗೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 500ರಿಂದ 1000 ರೂ ಬೆಲೆ ಕುಸಿತವಾಗಿ ರೈತರನ್ನು ಚಿಂತೆಗೀಡು ಮಾಡಿದೆ.
ಲಕ್ಮೇಶ್ವರದ ಎಪಿಎಂಸಿಯಲ್ಲಿ ಈ ತಿಂಗಳು6122ಕ್ವಿಂಟಲ್ ಶೇಂಗಾ ಮಾರಾಟವಾಗಿದೆ. ಸೋಮವಾರ 915 ಚೀಲ ಆವಕವಾಗಿದ್ದು, ಕನಿಷ್ಠ ದರ 2500, ಗರಿಷ್ಠ 6200ಸರಾಸರಿ 4117 ರಷ್ಟು ಮಾರಾಟವಾಗಿದೆ. ದರ ಕುಸಿತದ ಬಗ್ಗೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ರೈತ ಫಕ್ಕೀರಸಾಬ ನದಾಫ್ ಲಕ್ಮೇಶ್ವರದ ಎಪಿಎಂಸಿಗೆ ಶೇಂಗಾ ಮಾರಾಟಕ್ಕೆ ಬಂದ ಸಂದರ್ಭದಲ್ಲಿ ತಮ್ಮ ಅಸಮಾಧಾನ ಹಂಚಿಕೊAಡು, ಜೀವನಾಡಿಗಳ ಆಹಾರಕ್ಕಾಗಿಯೇ ಬೆಳೆದ ಶೇಂಗಾ ಹೊಟ್ಟು ಅಕಾಲಿಕ ಮಳೆಗೆ ಹಾಳಾಗಿದೆ. ಮಾರುಕಟ್ಟೆಗೆ ಫಸಲು ತಂದ ಸ್ಥಿತಿ ಅತ್ತ ದರಿ-ಇತ್ತ ಪುಲಿ ಎನ್ನುವಂತಾಗಿ ಕೊನೆಗೆ ಕೈಗೆ ಬಂದ ದರಕ್ಕೆ ಮಾರಾಟ ಮಾಡಿ ಸಪ್ಪೆ ಮೋರೆ ಹಾಕಿ ಸಾಗುವಂತಾಗಿದೆ. ಪ್ರತಿ ಎಕರೆಗೆ ಖರ್ಚು ಮಾಡಿದ 25 ಸಾವಿರ ರೂ ಸಹ ರೈತರ ಕೈಗೆ ಸಿಗದಂತಾಗಿದೆ ಎಂದರು.
ರೈತರ ಫಸಲಿಗೆ ಉತ್ತಮ ಬೆಲೆ ಒದಗಿಸುವ, ಸೂಕ್ತ ಕಾಲದಲ್ಲಿ ಬೆಂಬಲ ಬೆಲೆಯಡಿ ಖರೀದಿಸುವ ನಿಟ್ಟಿನಲ್ಲಿ ಸರ್ಕಾರಗಳು ರೈತಪರ ಕಾಳಜಿ ತೋರಬೇಕು. ರೈತರು ಬೆಳೆ ಮಾರಾಟ ಮಾಡಿದ ಮೇಲೆ ಬೆಂಬಲ ಖರೀದಿ ಕೇಂದ್ರಗಳು ಪ್ರಾರಂಭವಾಗುವುದು ಯಾವ ಉದ್ದೇಶಕ್ಕೆ ಎಂದು ರೈತ ಮುಖಂಡ ಶಿವಾನಂದ ಲಿಂಗಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಕುರಿತು ಲಕ್ಮೇಶ್ವರ ಎಪಿಎಂಸಿ ಖರೀದಿದಾರರೋರ್ವರನ್ನು ಮಾತನಾಡಿಸಿದಾಗ, ಶೇಂಗಾ ಕಾಳಿನಲ್ಲಿ ಎಣ್ಣೆ ಪ್ರಮಾಣ ಕಡಿಮೆಯಿದೆ ಮತ್ತು ಗುಣಮಟ್ಟದ ಕೊರತೆಯಿದೆ. ಗುಜರಾತದಿಂದ ಉತ್ತಮ ಗುಣಮಟ್ಟದ ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಮಾರುಕಟ್ಟೆಗೆ ಬರುತ್ತಿದೆ. ಇದೀಗ ಬಿತ್ತನೆ ಬೀಜದ ಮಾರಾಟ/ಬೇಡಿಕೆ ಇಲ್ಲದ ಕಾರಣ ಎಲ್ಲ ಎಪಿಎಂಸಿಗಳಲ್ಲಿ ಬೆಲೆ ಕಡಿಮೆಯಾಗಿದೆ ಎಂದರು.


