ಬೆಂಗಳೂರು:- ಮಾಜಿ ಸಿಎಂ ಎಸ್ ಎಂಬ ಕೃಷ್ಣ ಅವರ ನಿಧನಕ್ಕೆ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಸಂತಾಪ ಸೂಚಿಸಿದ್ದಾರೆ.
Advertisement
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಂದು ಬೆಂಗಳೂರು ಸದಾಶಿವ ನಗರದ ಎಸ್‌ಎಂ ಕೃಷ್ಣ ನಿವಾಸಕ್ಕೆ ಆಗಮಿಸಿ ಎಸ್‌ಎಂಕೆಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಕುಂಬ್ಳೆ, ಎಸ್ ಎಂ ಕೃಷ್ಣ ಅವರ ಕೊಡುಗೆ ಕರ್ನಾಟಕಕ್ಕೆ ಅಪಾರ. ಬೆಂಗಳೂರು, ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಸಾಕಷ್ಟಿದೆ. ಜೊತೆಗೆ ಕ್ರೀಡೆಗೂ ತುಂಬಾ ಪ್ರೋತಾಹ ನೀಡುತ್ತಿದ್ದರು ಎಂದರು.
ಎಸ್‌ಎಂ ಕೃಷ್ಣ ಅವರ ಅಗಲಿಕೆ ರಾಜ್ಯಕ್ಕೆ ದು:ಖಕರವಾದ ಸಂಗತಿ. ನಾವೆಲ್ಲ ಕುಟುಂಬದ ರೀತಿ ಇದ್ದೇವು ಎಂದು ಸ್ಮರಿಸಿದರು.