ಶಾಲೆಗಳು ಮಕ್ಕಳ ಪ್ರಗತಿಯ ಕೇಂದ್ರಗಳು: ಕವಿತಾ ಬೇಲೇರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ಪಾಲಕ-ಪೋಷಕರ ಸೂಕ್ತ ಸಲಹೆ ಸೂಚನೆಗಳಿಗೆ ಮುಕ್ತ ಅವಕಾಶವಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಚಿಂತನೆಯೇ ನಮ್ಮೆಲ್ಲರ ಗುರಿಯಾಗಿರಲಿ. ಶಾಲೆಗಳು ಮಕ್ಕಳ ಪ್ರಗತಿಯ ಕೇಂದ್ರಗಳಾಗಿವೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.

Advertisement

ಅವರು ಗದುಗಿನ ಸರ್ಕಾರಿ ಶಾಲೆ ನಂ 15ರಲ್ಲಿ ಜರುಗಿದ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಾವು ಮಾಡಬೇಕಾದ ಕೆಲಸ-ಕಾರ್ಯಗಳ ಕುರಿತು ಚಿಂತನೆ ನಡೆಯಲಿ. ಪ್ರತಿದಿನ ಮಕ್ಕಳು ಶಾಲೆಗೆ ಬರಬೇಕು. ಯಾವ ಮಗುವೂ ಶಾಲೆಯಿಂದ ಹೊರಗುಳಿಯದಂತೆ ಕಾಳಜಿ ವಹಿಸಬೇಕು. ಸರ್ಕಾರದ ಸೌಲಭ್ಯಗಳು ವಿದ್ಯಾರ್ಥಿಗಳನ್ನು ತಲುಪುತ್ತಿದ್ದು ಮಕ್ಕಳು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂದರು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶೋಭಾ ಬಸವಾ ಮಾತನಾಡಿ, ಮಕ್ಕಳ ಕಲಿಕೆಗೆ ನಾವೆಲ್ಲರೂ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಶಾಲೆಗಳು ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.

ದೀಪಿಕಾ ಮರಬದ ಹಾಗೂ ಕಾಂಚನಾ ಮುಧೋಳ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯೆ ವ್ಹಿ.ಎಸ್. ಬಸಾಪೂರ ಸ್ವಾಗತಿಸಿದರು. ಪಿ.ಎಸ್. ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಯಶೋಧಾ ನಿರೂಪಿಸಿದರು. ವ್ಹಿ.ಬಿ. ಕರಬಸಗೌಡ್ರ ವಂದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಸೇರಿದಂತೆ ಅತಿಥಿ ಶಿಕ್ಷಕಿ ಶೋಭಾ ವಗ್ಗಿ, ಆಸ್ಮಾ ಬಾಗಲಕೋಟಿ, ಶಾರದಾ ಮೊರಬದ, ಕೋಮಲಾ ರಾಯಬಾಗಿ, ಲಲಿತಾ ಮಿಸ್ಕಿನ್, ಕಾವ್ಯ ಮಡಿವಾಳರ, ಸುರೇಶ ದಹಿಂಡೆ, ರಚನಾ ಪಾಟೀಲ, ಮಂಗಲಾ ಯಂಡಿಗೇರಿ, ಮಲ್ಲಮ್ಮ ಭಜಂತ್ರಿ, ಉದಯಕುಮಾರ ಚಿಮ್ಮಲಗಿ, ಮಲ್ಲೇಶ ಮುಧೋಳ, ರಾಮಪ್ಪ ಕೊರವರ, ಸರೋಜಾ ಪೂಜಾರ, ಅರವಿಂದ ಕಿರೇಸೂರ, ಮಂಜುನಾಥ, ಶುಭಂ ಕಾಟವಾ, ಹಸೀನಾ ಅಧೋನಿ, ಶಾಂತಾ ಮಾದರ ಸಲಹೆ-ಸೂಚನೆ ನೀಡಿದರು.


Spread the love

LEAVE A REPLY

Please enter your comment!
Please enter your name here