ಮಣಿರತ್ನಂ ನಿರ್ದೇಶನದ ಸಿನಿಮಾದಲ್ಲಿ ರಜನಿಕಾಂತ್‌: 34 ವರ್ಷಗಳ ಬಳಿಕೆ ಒಂದಾಗಲಿದೆ ಸೂಪರ್ ಹಿಟ್‌ ಜೋಡಿ

0
Spread the love

ಕಾಲಿವುಡ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 75ನೇ ವಸಂತಕ್ಕೆ ಕಾಲಿಡುತ್ತಿರುವ ರಜನಿಕಾಂತ್ ಇಂದಿಗೂ ಚಿತ್ರರಂಗದಲ್ಲಿ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ.ಸದ್ಯ ರಜನಿಕಾಂತ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು ಯುವ ಪೀಳಿಗೆಯೂ ಚಾಚುವಂತೆ ಕೆಲಸ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಚಿತ್ರಗಳ ಮಹತ್ವದ ಅಪ್‌ಡೇಟ್‌ ಹೊರ ಬೀಳುವ ಸಾಧ್ಯತೆ ಇದ್ದು ಇದಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Advertisement

ಕಾಲಿವುಡ್‌ನ ಪ್ರತಿಭಾನ್ವಿತ ನಿರ್ದೇಶಕ, ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಲೋಕೇಶ್‌ ಕನಕರಾಜನ್‌ ಅವರ ʼಕೂಲಿʼ ಚಿತ್ರದಲ್ಲಿ ರಜನಿಕಾಂತ್‌ ನಟಿಸುತ್ತಿದ್ದು, ಚಿತ್ರೀಕರಣ ಈಗಾಗಲೇ ಅಂತಿಮ ಹಂತದಲ್ಲಿದೆ. ಈ ಮಧ್ಯೆ ರಜನಿಕಾಂತ್‌ ಅವರ ಫ್ಯಾನ್ಸ್‌ಗೆ ಮತ್ತೊಂಡು ಗುಡ್‌ನ್ಯೂಸ್‌ ಸಿಕ್ಕಿದೆ. ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಣಿರತ್ನಂ ಅವರ ಮುಂದಿನ ಚಿತ್ರವನ್ನು ತಲೈವಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಇಂದು ಅಧಿಕೃತ ಮಾಹಿತಿ ಹೊರ ಭೀಳುವ ಸಾಧ್ಯತೆ ಇದೆ.

ಈ ಮೂಲಕ 3 ದಶಕಗಳ ಬಳಿಕ ಹಿಟ್‌ ಜೋಡಿ ಮತ್ತೆ ಒಂದಾಗಲಿದೆ. 1991ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ʼದಳಪತಿʼಯಲ್ಲಿ ರಜನಿಕಾಂತ್‌ ಮತ್ತು ಮಮ್ಮುಟ್ಟಿ ನಟಿಸಿದ್ದರು. ಗ್ಯಾಂಗ್‌ಸ್ಟರ್‌ ಡ್ರಾಮಾ ʼದಳಪತಿʼ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಮಹಾಭಾರತದ ಕರ್ಣ ಮತ್ತು ದುರ್ಯೋಧನರ ಗೆಳೆತನದ ಆಧಾರದಲ್ಲಿ ಮಣಿರತ್ನಂ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಈ ಚಿತ್ರದಲ್ಲಿನ ರಜನಿಕಾಂತ್‌ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಅದಾದ ಬಳಿಕ ಈ ಇಬ್ಬರು ದಿಗ್ಗಜರು ತೆರೆ ಮೇಲೆ ಒಂದಾಗಿರಲಿಲ್ಲ. ಇದೀಗ ಬರೋಬ್ಬರಿ 34 ವರ್ಷಗಳ ಮಣಿರತ್ನಂ ಮತ್ತು ರಜನಿಕಾಂತ್‌ ಕಾಂಬಿನೇಷನ್‌ನ ಚಿತ್ರ ಬರಲಿದ್ದು, ಅಭಿಮಾನಿಗಳು ಚಿತ್ರ ಅನೌನ್ಸ್ ಆಗಲು ಕಾಯುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here