ದಕ್ಷಿಣ ಆಫ್ರಿಕಾ ನೆಲದಲ್ಲಿ ರೋಹಿತ್ ಆಟ ನಡೆಯಲ್ಲ: ಮಾಜಿ ಆಫ್ರಿಕನ್ ಕ್ರಿಕೆಟಿಗನ ವ್ಯಂಗ್ಯದ ಮಾತು!

0
Spread the love

ಭಾರತದ ನಾಯಕ ರೋಹಿತ್​ ಶರ್ಮಾ ಅವರ ಫಿಟ್ನೆಸ್ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡ್ಯಾರಿಲ್ ಕುಲ್ಲಿನನ್ ವ್ಯಂಗ್ಯವಾಡಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಅವರು, ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕುರಿತು ಮೊದಲು ಪ್ರಶ್ನೆಗಳನ್ನು ಎತ್ತಿದರು. ನಂತರ ಅವರ ತೂಕದ ಮೇಲೆ ವ್ಯಂಗ್ಯವಾಡಿದರು. ಹಿಟ್‌ಮ್ಯಾನ್ ರೋಹಿತ್ ಫ್ಲಾಟ್ ಪಿಚ್‌ಗಳ ರಾಜ. ಅವರು ಭಾರತದ ಪಿಚ್‌ಗಳಲ್ಲಿ ಮಾತ್ರ ರನ್ ಗಳಿಸಬಲ್ಲರು.

ರೋಹಿತ್ ಶರ್ಮಾ ಸಾಗರೋತ್ತರ ಪಿಚ್‌ಗಳಿಗೆ ಪರಿಪೂರ್ಣ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ವಿಶೇಷವಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಅವರ ಆಟ ನಡೆಯುವುದಿಲ್ಲ. ಅವರು ತವರು ನೆಲದಲ್ಲಿ ಮಾತ್ರ ರನ್ ಗಳಿಸಬಲ್ಲರು, ಅವರ ಅಂಕಿಅಂಶಗಳು ಸಹ ಇದಕ್ಕೆ ಸಾಕ್ಷಿಯಾಗಿದೆ.

ಇದೇ ವೇಳೆ ರೋಹಿತ್ ಅವರ ಫಿಟ್ನೆಸ್​ ಬಗ್ಗೆ ಮಾತನಾಡಿದ ಅವರು, ‘ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದೈಹಿಕ ಸ್ಥಿತಿಯಲ್ಲಿನ ವ್ಯತ್ಯಾಸವನ್ನು ನೋಡಿ. ರೋಹಿತ್ ಅಧಿಕ ತೂಕ ಹೊಂದಿರುವ ಕಾರಣ, ಅವರು ಹೆಚ್ಚು ಕಾಲ ಕ್ರಿಕೆಟ್ ಆಡುವ ಕ್ರಿಕೆಟಿಗನಲ್ಲ.

ನಾಲ್ಕೈದು ದಿನಗಳ ಪಂದ್ಯ ಆಡಲು ರೋಹಿತ್ ಅವರ ದೈಹಿಕ ಸ್ಥಿತಿ ಸರಿಹೊಂದುವುದಿಲ್ಲ. ಅಲ್ಲದೆ ಅವರ ದೈಹಿಕ ಸ್ಥಿತಿ ಒಂದೇ ಆಗಿಲ್ಲದ ಕಾರಣ ಅವರು ಇನ್ನು ಮುಂದೆ ಲಾಂಗ್ ಫಾರ್ಮ್ಯಾಟ್ ಕ್ರಿಕೆಟ್​ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here