ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರು ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರನ್ನು ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ವರಿಸಿದ್ದಾರೆ.
ನಟಿ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯನನ್ನೇ ಮದುವೆ ಆಗಿದ್ದಾರೆ. ಕೀರ್ತಿ ಸುರೇಶ್ ಹಾಗೂ ಆಂಟೊನಿ ತಟ್ಟಿಲ್ ಇಬ್ಬರು ಕ್ಲಾಸ್ಮೇಟ್ಸ್ ಆಗಿದ್ದು ಸುಮಾರು 15 ವರ್ಷಗಳ ಗೆಳೆತನ. ಒಟ್ಟಿಗೆ ಹೈಸ್ಕೂಲ್ನಲ್ಲಿ ಓದಿದ್ರು. ಇದು ಹಲವು ವರ್ಷಗಳಿಂದ ಈ ಇಬ್ಬರು ಪ್ರೀತಿ ಮಾಡುತ್ತಿದ್ದರು. ಕುಟುಂಬಸ್ಥರ ಒಪ್ಪಿಗೆ ಮೆರೆಗೆ ನಟಿ ಕೀರ್ತಿ ಸುರೇಶ್ ಹಾಗೂ ಆಂಟೊನಿ ತಟ್ಟಿಲ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಗೋವಾದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ಆಂಟನಿ ತಟ್ಟಿಲ್ ಕೀರ್ತಿ ಸುರೇಶ್ಗೆ ಕುಟುಂಬಸ್ಥರ ಸಮ್ಮುಖದಲ್ಲಿ ಹಾಗೂ ಆತ್ಮೀಯರ ಮುಂದೆ ತಾಳಿ ಕಟ್ಟಿದ್ದಾರೆ.
ಆಂಟೊನಿ ತಟ್ಟಿಲ್ ಮೂಲತಃ ಕೇರಳದ ಕೊಚ್ಚಿಯವರು. ದುಬೈನಲ್ಲಿ ಇವರದ್ದು ಹಲವು ಬ್ಯುಸಿನೆಸ್ ಇದೆ. ಹುಟ್ಟಿದ್ದು ಕೇರಳದಲ್ಲಾದ್ರೂ ಬೆಳೆದಿದ್ದು ಮಾತ್ರ ಚೆನ್ನೈನಲ್ಲೇ.ಸದ್ಯ ಆಂಟೊನಿ ತಟ್ಟಿಲ್ ದುಬೈನಲ್ಲಿ ನೆಲೆಸಿದ್ದಾರೆ.