ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಮಟ್ಟದದ `ಸುವರ್ಣ ಪ್ರಶಸ್ತಿ’ಗೆ ಭಾಜನರಾದ ಬಂಜಾರ ಕಲಾವಿದ ಸುರೇಶ ಲಮಾಣಿಯರಿಗೆ ಕಳಸಾಪುರ ಗ್ರಾಮ, ತಾಂಡಾ ಹಾಗೂ ಆದಿತ್ಯ ನಗರದ ಗುರು-ಹಿರಿಯರ ವತಿಯಿಂದ ಸನ್ಮಾನಿಸಿದರು.
ಪ್ರಶಸ್ತಿ ಪಡೆದು ಗ್ರಾಮಕ್ಕೆ ಕೀರ್ತಿ ತಂದ ಸುರೇಶ ಲಮಾಣಿಯವರನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬಂಜಾರ, ವೀರಶೈವ, ವಾಲ್ಮೀಕಿ, ಡೋಹರ ಕಕ್ಕಯ್ಯ ಹಾಗೂ ಹಲವು ಸಮುದಾಯಗಳಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರದರಾವ್ ಹುಯಿಲಗೋಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪರಮೇಶ ನಾಯಕ, ಅನುಸೂಯ ಬೆಟಿಗೇರಿ, ಸಿ.ಬಿ. ಪಲ್ಲದ್, ಸಹದೇವ ಘೋಡಕೆ, ರಾಮಪ್ಪ ಅಣ್ಣಿಗೇರಿ, ಮಾಸಾಬಿ ಪೆಂಡಾರಿ, ರತ್ನಾ ನಾಯ್ಕರ, ರಾಜಕುಮಾರ ಕಟ್ಟಿಮನಿ, ಚಂದ್ರು ಲಮಾಣಿ, ಕೃಷ್ಣಪ್ಪ ಲಮಾಣಿ, ಕುಮಾರ್ ಕಟ್ಟಿಮನಿ, ಲಕ್ಷ್ಮವ್ವ ಚವ್ಹಾಣ, ಮಂಜುಳಾ ನರಸಾಪುರ್, ರಾಮಕೃಷ್ಣ ಬೇವಿನಕಟ್ಟಿ, ಮಾಬುಲಿ ಪೆಂಡಾರಿ, ವಿಜಯ ಕಾರಬಾರಿ, ಶಿವಪುತ್ರಪ್ಪ ನಾಯ್ಕ, ಕುಮಾರ್ ಕಾರಬಾರಿ, ಕೃಷ್ಣಪ್ಪ ಲಮಾಣಿ, ಪರಶುರಾಮ್ ಚೌವ್ಹಾಣ, ಗಣೇಶ್ ಕಟ್ಟಿಮನಿ ಸೇರಿದಂತೆ ಗ್ರಾಮದ ಗುರುಹಿರಿಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಎಚ್.ವೈ. ತಳವಾರ ಕಾರ್ಯಕ್ರಮ ನಿರೂಪಿಸಿದರು.