ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್: ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅರೆಸ್ಟ್!

0
Spread the love

ತುಮಕೂರು:- ಮಾಜಿ ಬಿಗ್​ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ಸೈನ್ಸ್ ವಿಡಿಯೋ ಹೆಸರಿನಲ್ಲಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಬಿಗ್​ಬಾಸ್​ ಸ್ಪರ್ಧಿ ಡ್ರೋನ್ ಪ್ರತಾಪ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನಿರ್ಜನ ಪ್ರದರ್ಶನದಲ್ಲಿದ್ದ ಕೃಷಿ ಹೊಂಡದಂತ ಆಳವಾದ ಗುಂಡಿಯಲ್ಲಿನ ನೀರಿಗೆ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದರು. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್‌ ಆಗಿದೆ, ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ.

ಈ ವೀಡಿಯೋ ನೋಡಿ ಪ್ರತಾಪ್‌ ಬಿಲ್ಡಪ್ ಬೇರೆ ಕೊಟ್ಟಿದ್ದರು. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್‌ ಕೂಗಿದ್ದರು. ಈ ವಿಡಿಯೋ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಇದೀಗ ಪ್ರತಾಪ್ ರನ್ನು ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


Spread the love

LEAVE A REPLY

Please enter your comment!
Please enter your name here