ಪೊಲೀಸರ ಕಾರ್ಯಾಚರಣೆ: ಗಂಧದ ತುಂಡುಗಳನ್ನ ಸಾಗಾಟ ಮಾಡ್ತಿದ್ದ ಆರೋಪಿ ಅರೆಸ್ಟ್

0
Spread the love

ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಗಂಧದ ತುಂಡುಗಳನ್ನ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಪುರ ರಸ್ತೆ ಕಡೆಯಿಂದ ಉತ್ತರಹಳ್ಳಿ ಕಡೆಗೆ ಸಾಗಾಟದ ಮಾಹಿತಿಯನ್ನು ಆಧರಿಸಿ ಒಬ್ಬ ಆರೋಪಿಯನ್ನ ಬಂಧಿಸಿದ್ದಾರೆ.

Advertisement

ಆತನ ವಿಚಾರಣೆ ವೇಳೆ ಆತನ ಇಬ್ಬರು ಸಹಚರರ ಬಗೆಗಿನ ಮಾಹಿತಿ ಬೆಳಕಿಗೆ ಬಂದಿದ್ದು, ಕಾಡಿಗೆ ಸೌದೆ ತರುವಂತೆ ಹೋಗಿ ಗಂಧದ ಕಳ್ಳತನ ಮಾಡ್ತಿದ್ದ ಬಂಧಿತ ಆರೋಪಿಯು ಕೊಡಗು,ವಿರಾಜಪೇಟೆ,ಸಿದ್ದಾಪುರ ಭಾಗದ ಅರಣ್ಯ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದನು.

ನಂತರ ಪಿರಿಯಾಪಟ್ಟಣದ ತನ್ನ ಮನೆಯಲ್ಲಿ ಬಚ್ಚಿಟ್ಟು, ನಂತರ ಗಿರಾಕಿಗಳನ್ನ ಹುಡುಕಿ ಮಾರಾಟ ಮಾಡುತ್ತಿದ್ದರು. ಆರೋಪಿಯಿಂದ 14,60,000 ಮೌಲ್ಯದ 146 ಕೆಜಿ ಶ್ರೀಗಂಧ ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

 


Spread the love

LEAVE A REPLY

Please enter your comment!
Please enter your name here