ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ವತಿಯಿಂದ ಡಿ. ೧೪ರಂದು ಸಂಜೆ ೬ ಗಂಟೆಗೆ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಫಕೀರಮ್ಮ ಬ.ಚಿಗಟೇರಿ ರಚಿಸಿದ ‘ಹೆಪ್ಪುಗಟ್ಟಿದ ಕಣ್ಣೀರು’ ಗೀತ ಸಂಕಲನ ಲೋಕಾರ್ಪಣೆ ಜರುಗಲಿದೆ.
ಪುಸ್ತಕವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯರಾದ ಡಾ. ಜಿ.ಬಿ. ಬೀಡನಾಳ ಲೋಕಾರ್ಪಣೆಗೊಳಿಸುವರು. ಪುಸ್ತಕದ ಕುರಿತು ಕೊಪ್ಪಳದ ಸಾಹಿತಿಗಳಾದ ಡಿ. ರಾಮಣ್ಣ ಅಲ್ಮರ್ಸಿಕೇರಿ ಮಾತನಾಡುವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಚಂದ್ರಕಲಾ ಇಟಗಿಮಠ, ಶ್ರೀ ನೀ ಶ್ರೀಶೈಲ್ ಹುಲ್ಲೂರ, ಎ.ಎಸ್. ಮಕಾನದಾರ, ಸಂಜೀವ ಧುಮಕನಾಳ ಹಾಗೂ ನೇತ್ರಾ ರುದ್ರಾಪೂರಮಠ ಇವರು ಭಾಗವಹಿಸುವರು. ಪುಸ್ತಕ ಲೇಖಕಿ ಫಕೀರಮ್ಮ ಚಿಗಟೇರಿ ಉಪಸ್ಥಿತರಿರುವರು.
ಸದಸ್ಯರು, ಆಸಕ್ತರು, ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ದತ್ತಪ್ರಸನ್ನ ಪಾಟೀಲ, ಶ್ರೀಕಾಂತ ಬಡ್ಡೂರ ಕೋರಿದ್ದಾರೆ.