ದೊಡ್ಡೂರ ಗ್ರಾ.ಪಂ ಅಧ್ಯಕ್ಷರಾಗಿ ಚಂದ್ರಶೇಖರ ಈಳಗೇರ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ,ಲಕ್ಮೇಶ್ವರ: ದೊಡ್ಡೂರ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಚಂದ್ರಶೇಖರ ಈಳಗೇರ ಅಧ್ಯಕ್ಷರಾಗಿ ಹಾಗೂ ಸುಶೀಲಾ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಒಟ್ಟು 15 ಸದಸ್ಯರನ್ನು ಹೊಂದಿರುವ ದೊಡ್ಡೂರ ಗ್ರಾ.ಪಂ ಚುನಾವಣೆ ಪ್ರಕ್ರಿಯೆಯಲ್ಲಿ 12 ಜನ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಈಳಗೇರ ಹಾಗೂ ಮಧುಮತಿ ಈಳಗೇರ ಅವರು ಸ್ಪರ್ಧಿಸಿದ್ದರು. ಚಂದ್ರಶೇಖರ ಈಳಗೇರ 10 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಮಧುಮತಿ ಈಳಗೇರ ಅವರು ಕೇವಲ 2 ಮತ ಪಡೆದು ಪರಾಭವ ಅನುಭವಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಸುಶೀಲಾ ಲಮಾಣಿ ಹಾಗೂ ಇಂದ್ರವ್ವ ಲಮಾಣಿ ಸ್ಪರ್ಧಿಸಿದ್ದು, ಸುಶೀಲಾ ಲಮಾಣಿ 9 ಮತ ಪಡೆದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಪ್ರತಿಸ್ಪರ್ಧಿ ಕೇವಲ ೩ ಮತ ಪಡೆದರು.  ಚುನಾವಣಾಧಿಕಾರಿಯಾಗಿ ತಾ.ಪಂ ಇಓ ಕೃಷ್ಣಪ್ಪ ಧರ್ಮರ ಕಾರ್ಯನಿರ್ವಹಿಸಿದರು. ಈ ವೇಳೆ ಬಿ.ಎಸ್. ಈಳಗೇರ, ಕೃಷ್ಣಾ ಲಮಾಣಿ, ಅಮರಪ್ಪ ಗುಡಗುಂಟಿ, ಪುಂಡಲೀಕ ಲಮಾಣಿ ಸೇರಿ ಸದಸ್ಯರು ಇದ್ದರು.


Spread the love

LEAVE A REPLY

Please enter your comment!
Please enter your name here