ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಗದಗ ವತಿಯಿಂದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಹಾಕುವ ಕಾರ್ಯಕ್ರಮ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಶ್ರೀ ವೀರಘಂಟಿ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ಮಡಿವಾಳ ಸಮಾಜದ ಬಾಂಧವರು ಈ ಯೋಜನೆಯಲ್ಲಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಿದರು. ಜಿಲ್ಲಾಧ್ಯಕ್ಷ ಮಲ್ಲಪ್ಪ ಮಡಿವಾಳ, ಗದಗ ತಾಲೂಕಾಧ್ಯಕ್ಷ ಆನಂದ ಮಡಿವಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಮಿಕ ಇಲಾಖೆ ಸಿಬ್ಬಂದಿ ಮಹಮ್ಮದ ಜಾಫರ ಸಿದ್ದಿ, ಗೌರವಾಧ್ಯಕ್ಷ ಶಿವಪ್ಪ ಮಡಿವಾಳರ, ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಫಕ್ಕೀರಪ್ಪ ಮಡಿವಾಳರ, ಗದಗ ಜಿಲ್ಲಾ ಮಡಿವಾಳ ಸಂಘದ ಜಿಲ್ಲಾ ಸದಸ್ಯರಾದ ನಾಗರಾಜ ಎಸ್.ಮೋಟಿ, ಕಲ್ಲಪ್ಪ ಮಡಿವಾಳರ, ಗಂಗಮ್ಮ ಮಡಿವಾಳರ, ನಾಗಾವಿ, ಕಣವಿ, ಹರ್ತಿ, ಬೆಳಹೊಡ, ಬೆನಕೊಪ್ಪ, ಅಸುಂಡಿ, ಹುಲಕೋಟಿ, ಕೋಟುಮಚಗಿ, ಲಿಂಗದಾಳ, ಹೊಂಬಳ ಗ್ರಾಮಗಳ ಮಡಿವಾಳ ಸಮಾಜದ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.