ರೈತರ ಹೆಸರಲ್ಲಿ ಸರ್ಕಾರಕ್ಕೂ ಕೋಟಿ ಕೋಟಿ ರೂ ವಂಚನೆ? ಗದುಗಿನಲ್ಲಿಯೇ ಇದ್ದಾರೆ ವಂಚಕ ಜಾಲದ ಕಿಂಗ್‌ಪಿನ್‌ಗಳು..!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೈತರ ಬದುಕು ಸದಾ ಕತ್ತಿಯ ಮೇಲಿನ ನಡಿಗೆಯಂತೆ. ಒಮ್ಮೆ ಚೆನ್ನಾಗಿ ಮಳೆ-ಬೆಳೆಯಾಗಿ ಉತ್ತಮ ಫಸಲು ಕೈಗೆ ದಕ್ಕಿದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಅಷ್ಟ ಅನುಭವಿಸಬೇಕಾಗುತ್ತದೆ. ಹವಾಮಾನ ವೈಪರಿತ್ಯದಿಂದ ಸದಾ ಆರ್ಥಿಕ ನಷ್ಟ ಅನುಭವಿಸುತ್ತಲೇ ಇರಬೇಕು. ಹೀಗೆ ಹವಾಮಾನ ವ್ಯತ್ಯಾಸದಿಂದ ರೈತರಿಗಾಗುವ ನಷ್ಟವನ್ನು ಹಗುರಗೊಳಿಸಿ ತುಸು ನೆಮ್ಮದಿ ನೀಡಿ ರೈತ ವಲಯಕ್ಕೆ ಆಸರೆಯಾಗಬೇಕೆಂಬ ಉದ್ದೇಶದಿಂದ ಸರ್ಕಾರ ಬೆಳೆ ವಿಮೆ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ರ‍್ವಾಂರ‍್ಯಾಮಿಯಾಗಿರುವ ಕುತಂತ್ರಿಗಳು, ಧನ ಪಿಶಾಚಿಗಳು ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುವ ಷಡ್ಯಂತ್ರ ನಡೆಸಿದ್ದು, ಈ ವಂಚನೆಯ ಪ್ರಮುಖ ರೂವಾರಿಗಳು ಗದಗ ಜಿಲ್ಲೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ.

Advertisement

ಕಳೆದ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಗೆ ಬೆಳೆವಿಮೆ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆ ಪ್ರಕಾರ ರೈತರ ಬೆಳೆವಿಮೆ ಹಣವನ್ನ ವಂಚಕರೇ ಭರಿಸಿ, ವಿಮೆ ಪರಿಹಾರ ಬಂದ ಹಣದಲ್ಲಿ `50-50′ ಮಾತುಕತೆ ಮಾಡಿಕೊಂಡು ಬಡ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರತೊಡಗಿವೆ.

ಇಂತಹ ವಂಚಕರು ಪ್ರತಿ ಗ್ರಾಮದಲ್ಲಿಯೂ ನೀಚ ಮನಸ್ಥಿತಿಯ ಸ್ಥಳೀಯ ಶ್ರೀಮಂತರ ಮೂಲಕ ಈ ಮೋಸದ ಜಾಲ ಬೀಸಿ, ಕೋಟಿ ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದು, ಸರಕಾರವನ್ನೂ ವಂಚಿಸುತ್ತಿದ್ದಾರೆ. ಈ ವಂಚನೆಯಲ್ಲಿ ಕೆಲ ಗ್ರಾಮ ಸೇವಕರು, ಪಿಡಿಓಗಳು ಕೂಡ ಇರುವುದು ಕಂಡು ಬಂದಿದೆ. ಬೆಳೆವಿಮೆ ಮಾಡಿಸಿದ ಹೊಲದಲ್ಲಿ ಚೆನ್ನಾಗಿಯೇ ಬೆಳೆದಿದ್ದ ಬೆಳೆಯನ್ನು ರಾತ್ರೋರಾತ್ರಿ ಖಾಲಿ ಮಾಡಿಸಿ, ವೀಕ್ಷಣೆ ಮಾಡಲು ಬಂದ ತಂಡಗಳಿಗೂ ಟೋಪಿ ಹಾಕಿ ಕಳಿಸಲಾಗಿದೆ ಎಂಬ ಅಂಶ ಬಯಲಾಗಿದೆ.

ಗದಗ ಜಿಲ್ಲೆಯ ಹಳ್ಳಿಯೊಂದರ ಶ್ರೀಮಂತ ರೈತನೇ ಇದರ ಕಿಂಗ್‌ಪಿನ್ ಎನ್ನಲಾಗಿದ್ದು, ಆತನ ಅಡಿಯಲ್ಲಿ ಹಲವರು ಏಜೆಂಟ್‌ಗಿರಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲವು ಗ್ರಾಮ ಒನ್ ಕೇಂದ್ರಗಳು ಕೂಡ ಇವರ ಜೊತೆ ಶಾಮೀಲಾಗಿವೆ ಎನ್ನಲಾಗುತ್ತಿದೆ.

ತೆರೆಮರೆಯಲ್ಲಿಯೇ ಕುಳಿತು ಇಂತಹ ವಂಚನೆಯ ಆಟವಾಡಿ ರೈತರಿಗೆ ಹಾಗೂ ಸರ್ಕಾರಕ್ಕೆ ಲಕ್ಷಾಂತರ ರೂ ನಾಮ ಎಳೆಯುತ್ತಿರುವ ಈ ಕಿಂಗ್‌ಪಿನ್‌ಗಳು ಗದಗ ಜಿಲ್ಲೆಯಲ್ಲಿಯೇ ಇದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ನಿಜ ರೈತರಿಗೆ ಅನುಕೂಲ ಮಾಡಿಕೊಡತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

ಬೆಳೆವಿಮೆ ಹಣವನ್ನು ರೈತರೇ ಖುದ್ದಾಗಿ ಭರಣ ಮಾಡಬೇಕು. ಆದರೆ, ವಂಚಕರು ಶ್ರೀಮಂತ ರೈತರ ಉತಾರ ಮತ್ತು ಆಧಾರ್ ಕರ‍್ಡ್ ಪಡೆದು ಹಣವನ್ನು ತಾವೇ ಭರಿಸುತ್ತಾರೆ. ಇದಾದ ಮೇಲೆ ಬೆಳೆವಿಮೆ ಹಣ ರೈತನ ಖಾತೆಗೆ ಜಮಾ ಆದಾಗ, ಅದರಲ್ಲಿ ಶೇ.50ರಷ್ಟು ಹಣವನ್ನು ವಂಚಕರಿಗೆ ನೀಡಬೇಕಾಗಿದ್ದು, ಅದನ್ನು ಏಜೆಂಟರ ಮೂಲಕ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಗದಗ ನಗರ ಹಾಗೂ ಗದಗ ಗ್ರಾಮೀಣ ಪ್ರದೇಶದಲ್ಲಿ ಬೀಡುಬಿಟ್ಟಿರುವ ಇಬ್ಬರು ವ್ಯಕ್ತಿಗಳು ಸಾವಿರಾರು ಶ್ರೀಮಂತ ರೈತರ ಬೆಳೆವಿಮೆಯನ್ನು ತಾವೇ ತುಂಬಿ, ಕೋಟಿ ಕೋಟಿ ರೂ ಹಣ ಗಳಿಸಿ, ಸರಕಾರಕ್ಕೆ ಹಾಗೂ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಈ ಕುರಿತು ವಿಶೇಷ ವರದಿಗಳ ಸರಣಿ ನಿಮ್ಮ `ವಿಜಯಸಾಕ್ಷಿ’ಯಲ್ಲಿ ಪ್ರಕಟಗೊಳ್ಳಲಿದೆ.


Spread the love

LEAVE A REPLY

Please enter your comment!
Please enter your name here