ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬೇಡಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಲಕ್ಮೇಶ್ವರ ತಾಲೂಕಾ ವೈದ್ಯರ ಸಂಘದಿAದ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಅರ್ಪಿಸಲಾಯಿತು.

Advertisement

ಮನವಿಯಲ್ಲಿ, ಗದಗ ಜಿಲ್ಲೆಯ ಕಪ್ಪತಗುಡ್ಡದ ವಿಶಾಲವಾದ ಪ್ರದೇಶದಲ್ಲಿ ಅಪರೂಪದ ನೂರಾರು ಜಾತಿಯ ಪ್ರಾಣಿ-ಪಕ್ಷಿಗಳು, ಸರೀಸೃಪಗಳು ಹಾಗೂ ೫೦೦ಕ್ಕೂ ಹೆಚ್ಚು ಔಷಧೀಯ ಸಸ್ಯರಾಶಿಯೂ ಇದ್ದು, ಸದ್ಯ ವನ್ಯಜೀವಿಧಾಮದ ಕಾನೂನು ಪ್ರಕಾರ ಸಂರಕ್ಷಿತ ಜೀವ ವೈವಿಧ್ಯತಾ ತಾಣವನ್ನಾಗಿ ವಿಸ್ತರಿಸುವುದು ಮತ್ತು ಅದರ ಪರಿಧಿಯ ೧೦ ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸಲು ಕ್ರಮ ಕೈಗೊಳ್ಳಬೇಕು.

ಕಪ್ಪತ್ತಗುಡ್ಡದಲ್ಲಿ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಲು ಸಂಚು ನಡೆದಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಪ್ಪತಗುಡ್ಡ ವನ್ಯಜೀವಿಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ತಕ್ಷಣ ನಿರ್ಧಾರ ಕೈಗೊಳ್ಳಬೇಕು. ಸಾವಿರಾರು ಬಗೆಯ ಖನಿಜಗಳು ಕಪ್ಪತಗುಡ್ಡದ ಗರ್ಭದಲ್ಲಿದ್ದು, ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಇಡುವ ಮೂಲಕ ಯಾವುದೇ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿಯಬಾರದು ಎಂದು ಮನವಿಯಲ್ಲಿ ವಿನಂತಿಸಿದರು.

ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ವೈದ್ಯರ ಸಂಘದ ಅಧ್ಯಕ್ಷ ಡಾ. ಪಿ.ಡಿ. ತೋಟದ, ಹಿರಿಯ ವೈದ್ಯರಾದ ಡಾ. ಎಸ್.ಜಿ. ಹೂವಿನ್, ಡಾ. ಎಂ.ಆರ್. ಕಲಿವಾಳಮಠ, ಉಪಾಧ್ಯಕ್ಷ ಡಾ. ಎನ್.ಎಂ. ವಾಲಿ, ಕಾರ್ಯದರ್ಶಿ ಡಾ. ವಿ.ಎನ್. ಹೊನ್ನಿಕೊಪ್ಪ, ಡಾ. ಪ್ರಸನ್ನಕುಲಕರ್ಣಿ, ಡಾ. ಎ.ಎಚ್. ಅಮರಶೆಟ್ಟಿ, ಡಾ. ಎಂ.ಆರ್. ಗೋಣೆಪ್ಪನವರ, ಡಾ. ಎಸ್.ಎಂ. ಬಿಂಕದಕಟ್ಟಿ, ನಾಗರಾಜ ಕಳ್ಳಿಮನಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here