ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ನಿರ್ಮಲಾ ಪವಾಡದ ಇವರ ನೇತೃತ್ವದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವವನ್ನು ಸೋಮವಾರ ನೆರವೇರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಧರ್ಮ ಚಿಂತಕ ವೀರಣ್ಣ ಪವಾಡದ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲಿ ಕರುಣೆ, ದಯೆ ಇರುವದು ಅವಶ್ಯಕ. ಇವುಗಳು ಇಲ್ಲದೆ ಹೋದಲ್ಲಿ ಮಾನವ ಜನ್ಮಕ್ಕೆ ಬೆಲೆ ಇರುವದಿಲ್ಲ. ಬದುಕಿನ ಕತ್ತಲೆಯನ್ನು ಕಳೆಯಲು ಗುರು ಅವಶ್ಯ. ಕಾರ್ತಿಕ ಮಾಸ ಬೆಳಕಿನ ಹಬ್ಬವಾಗಿದ್ದು, ಎಲ್ಲೆಡೆಯೂ ದೀಪ ಬೆಳಗಿಸಿ ಸಂತೋಷ ಪಡುತ್ತಾರೆ. ದೀಪದಿಂದ ದೀಪ ಬೆಳಗಲಿ, ಎಲ್ಲೆಡೆ ಸುಜ್ಞಾನದ ಜ್ಯೋತಿ ಪ್ರಕಾಶಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷತಾ ಎಸ್.ಸಿ., ಶರಣಪ್ಪ ಹತ್ತಿಕಾಳ, ಲಾವಣ್ಯ ಪವಾಡದ, ಪ್ರವೀಣ್ ಹತ್ತಿಕಾಳ, ಲಕ್ಷ್ಮಿ ಪವಾಡದ, ಪ್ರಕಾಶ್ ಕರಡಿ, ಅರುಣ್, ಶಿವಯೋಗರಾಜ, ವಿಜಯ ವೀಣಾ, ಲೇಖನ, ನಮೃತಾ, ಗಗನ ಮುಂತಾದವರು ಇದ್ದರು.