ವಿಜಯಸಾಕ್ಷಿ ಸುದ್ದಿ, ಡಂಬಳ: ಕನ್ನಡ ನಾಡಿನಾದ್ಯಂತ ಬೆಳದು ಬಂದಿರುವ ಜಾನಪದ ಸೇರಿದಂತೆ ಮಣ್ಣಿನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಅಗತ್ಯವಾಗಿ ಮಾಡಬೇಕಾಗಿದೆ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಳ್ಳಪ್ಪ ಜೊಂಡಿ ಹೇಳಿದರು.
ಡಂಬಳ ಹೋಬಳಿಯ ಡೋಣಿ ಗ್ರಾಮದಲ್ಲಿ ಬೀರಲಿಂಗೇಶ್ವರ ಜನಪದ ಕಲಾ ತಂಡ ಡೋಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಡೊಳ್ಳಿನ ಪದಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖ್ಯಾತ ಜಾನಪದ ಕಲಾವಿದ ನಿಂಗಪ್ಪ ಗುಡ್ಡದ, ನಿಂಗಪ್ಪ ಹೊಸಹಳ್ಳಿ ಮಾತನಾಡಿ, ಪ್ರಕೃತಿ, ಕೃಷಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸದಿದ್ದರೆ ಜಾನಪದವು ಅಪಾಯದಂಚಿಗೆ ತಲುಪಬಹುದು. ಪ್ರಕೃತಿ ಮತ್ತು ಸಂಸ್ಕೃತಿಯ ಅವಿನಾಭಾವ ಸಂಬಂಧದ ಕುರಿತು ಚರ್ಚಿಸಿ ಅಭಿವೃದ್ಧಿಯ ಚಿಂತನೆ ರೂಪಿಸಬೇಕಿದೆ ಎಂದರು.
ಕಲಾತಂಡಗಳಾದ ಶ್ರೀ ಮಾಳಿಂಗರಾಯ ಗಾಯನ ಸಂಘ ಮುಗಳಿಹಾಳ, ರಾಯದುರ್ಗದ ಶ್ರೀ ರೇವಣಸಿದ್ದ ಗಾಯನ ಸಂಘ ಸಾಲಹಳ್ಳಿ, ಗೌಡಪ್ಪಗೌಡ ಬಮಪನವರ ತಂಡ, ಎಚ್.ಎಸ್. ವೆಂಕಟಾಪುರ, ಶಿವು ಭಜಂತ್ರಿ ತಂಡ, ಲಕ್ಕುಂಡಿ ಮೈಲಾರಲಿಂಗೇಶ್ವರ ಕಲಾ ತಂಡ ಬೆಲೇರಿ ಭಾಗವಹಿಸಿ ಕಲಾ ಪ್ರದರ್ಶನ ನಿಡಿದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪರಸಪ್ಪ ಬೆಳ್ಳಿ, ರಾಘವೇಂದ್ರ ಡೊಳ್ಳಿನ, ಎಪಿಎಂಸಿ ಮಾಜಿ ಸದಸ್ಯ ಮಳ್ಳಪ ಅಳವಂಡಿ, ಕುಮಾರಪ್ಪ ಬೆಲೆರಿ, ನಿಂಗಪ್ಪ ಹೋಸಹಳ್ಳಿ, ಹಾಲಪ್ಪ ಕುರಿ, ನಿಂಗಪ್ಪ ಗುಡ್ಡದ ಇದ್ದರು. ಹಾಲೇಶ್ ಅಣ್ಣೀಗೇರಿ ಸ್ವಾಗತಿಸಿದರು, ನಿಂಗರಾಜು ಗುಡ್ಡದ ನಿರೂಪಿಸಿದರು.