ಪಪ್ಪಾಯಿಯು ವಿಟಮಿನ್ ಸಿಯಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ರೋಗಗಳು ಮತ್ತು ಸೋಂಕುಗಳನ್ನು ತಡೆಗಟ್ಟುವಲ್ಲಿ ದೇಹಕ್ಕೆ ಸಹಾಯ ಮಾಡುತ್ತದೆ.
ಇನ್ನೂ ಚಳಿಗಾಲದಲ್ಲಿ ಪಪ್ಪಾಯಿ ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ನಿಯಮಿತವಾಗಿ ಪಪ್ಪಾಯಿ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.
ಪಪ್ಪಾಯಿಯಲ್ಲಿ ಫೈಬರ್, ಪ್ರೋಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಬಿ9, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಹಾಗಾಗಿ ಬೇಸಿಗೆಯಲ್ಲಿಯೂ ಕೆಲ ಮಂದಿ ಪ್ರತಿದಿನ ಪಪ್ಪಾಯಿಯನ್ನು ತಿನ್ನುತ್ತಾರೆ. ಆದರೆ ಎಲ್ಲಾ ಸೀಸನ್ಗಿಂತಲೂ ಚಳಿಗಾಲದಲ್ಲಿ ಪಪ್ಪಾಯಿಯನ್ನು ತಿನ್ನುವುದು ಬಹಳ ಮುಖ್ಯ.
ಏಕೆಂದರೆ ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಇದಲ್ಲದೇ, ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾದ ಕಾಲಜನ್ ಎಂಬ ಸಂಯುಕ್ತಗಳನ್ನು ಹೊಂದಿದೆ.
ಚಳಿಗಾಲದಲ್ಲಿ ಮಲಬದ್ಧತೆಯಿಂದ ಬಳಲುತ್ತಿರುವವರು ಪಪ್ಪಾಯಿಯನ್ನು ತಪ್ಪದೇ ಸೇವಿಸಬೇಕು. ಏಕೆಂದರೆ ಪಪ್ಪಾಯಿಯಲ್ಲಿ ಸಾಕಷ್ಟು ಫೈಬರ್ ಇದ್ದು, ಇದು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತಿನ್ನಬೇಕು.
ಪಪ್ಪಾಯಿಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಂಯುಕ್ತಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ತಿನ್ನುವುದರಿಂದ ಹೃದಯಾಘಾತದಂತಹ ಗಂಭೀರ ಕಾಯಿಲೆಗಳು ದೂರವಾಗುತ್ತವೆ ಮತ್ತು ಹೃದಯವು ಆರೋಗ್ಯಕರವಾಗಿರುತ್ತದೆ. ಇದಲ್ಲದೇ, ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಪಪ್ಪಾಯಿ ತುಂಬಾ ಸಹಾಯಕವಾಗಿದೆ.
ಪಪ್ಪಾಯಿಯಲ್ಲಿ ಫೈಬರ್ ಹೇರಳವಾಗಿದೆ. ಇದನ್ನು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಹಸಿವು ಆಗುವುದಿಲ್ಲ. ಯಾರಾದರೂ ತೂಕ ಇಳಿಸಿಕೊಳ್ಳಲು ಬಯಸಿದರೆ, ಚಳಿಗಾಲದಲ್ಲಿ ಆಹಾರವಾಗಿ ಪಪ್ಪಾಯಿಯನ್ನು ತಿನ್ನಿ ಎನ್ನಲಾಗಿದೆ.