ರಾಜ್ಯ ಮಟ್ಟದ ಭಜನಾ ಸ್ಪರ್ಧೆ: ದುರ್ಗಾದೇವಿ ಭಜನಾ ಸಂಘಕ್ಕೆ ಪ್ರಶಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಮೀಪದ ಹರ್ಲಾಪೂರ ಗ್ರಾಮದಲ್ಲಿ ಕೊಟ್ಟೂರೇಶ್ವರ ಮಠದ ನಮ್ಮೂರ ಲಕ್ಷ ದೀಪೋತ್ಸದಂಗವಾಗಿ ಕೊಟ್ಟೂರೇಶ್ವರ ಭಜನಾ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು-ಬೆಳಕಿನ ಭಜನಾ ಸ್ಪರ್ಧೆಯಲ್ಲಿ ರಾಮದುರ್ಗದ ದುರ್ಗಾದೇವಿ ಭಜನಾ ಸಂಘವು ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Advertisement

ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಾಯಮ್ಮದೇವಿ ಭಜನಾ ಸಂಘ ದ್ವಿತೀಯ, ಮುಂಡರಗಿ ತಾಲೂಕು ಜಂತ್ಲಿಶಿರೂರ ಗ್ರಾಮದ ತಾಯಮ್ಮದೇವಿ ಭಜನಾ ಸಂಘ ತೃತೀಯ ಹಾಗೂ ಚಿಕ್ಕ ಬಳಗೇರಿಯ ಬಾಬಾ ಭಜನಾ ಮಹಾರಾಜ ಸಂಘವು ಚತುರ್ಥ ಸ್ಥಾನ ಪಡೆಯಿತು. ಗದಗ, ಧಾರವಾಡ, ಬೆಳಗಾವಿ, ಕೊಪ್ಪಳ, ಬಳ್ಳಾರಿ ಜಿಲ್ಲೆಯ 16 ತಂಡಗಳು ಭಾಗವಹಿಸಿದ್ದವು.

ಭಜನಾ ಸ್ಪರ್ದೆಯ ಕಾರ್ಯಕ್ರಮವನ್ನು ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ  ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಮೊಬೈಲ್, ತಂತ್ರಜ್ಞಾನ ಯುಗದಲ್ಲಿ ಜಾನಪದ ಕಲೆಗಳು ಮರೆಯಾಗುತ್ತಿವೆ. ಇದರ ಉಳಿವಿಗಾಗಿ ಗ್ರಾಮದ ಕೊಟ್ಟೂರೇಶ್ವರ ಭಜನಾ ಸಂಘವು ರಚನೆಯಾದ ನಾಲ್ಕೇ ದಿನದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಕಾರ್ಯ ಎಂದರು.

ಶಿವಕುಮಾರಸ್ವಾಮಿ ಮಜ್ಜಿಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯರು, ಹರ್ತಿಮಠದ ಫಕ್ಕೀರಯ್ಯ ಶ್ರೀಗಳು, ಗ್ರಾ.ಪಂ ಅಧ್ಯಕ್ಷೆ ರೇಣುಕಾ ವಡ್ಡರ, ಉಪಾಧ್ಯಕ್ಷ ಅಡಿವೆಪ್ಪ ಗೌಡಪ್ಪನವರ, ಸದಸ್ಯರಾದ ಶಿದ್ದಲಿಂಗೇಶ ಯಾಳವಾಡ, ಅಕ್ಕಮ್ಮ ಕೋಗಿಲೆ, ನಿರ್ಮಲಾ ಕೊತ್ತಪ್ಪನವರ, ಕೆ.ಬಿ. ಕೊಣ್ಣೂರು, ಸಂಗೀತ ಕಲಾವಿದ ಕೆ.ಬಿ. ವೀರಾಪೂರ, ಮಹಾಂತೇಶ ಲಕ್ಕುಂಡಿ, ಶರಣಪ್ಪಗೌಡ ಪಾಟೀಲ, ಗೋವಿಂದರೆಡ್ಡಿ ಕೊಣ್ಣೂರು, ಸಂತೋಷ ವಡ್ಡರ, ಮಲಕಾಜಪ್ಪ ಯಾಳವಾಡ, ಮಹಾಲಿಂಗಪ್ಪ ಜಮಲಿಂಗಪ್ಪನವರ, ಮಲ್ಲಿಕಾಜುನಗೌಡ ಉಮಚಗಿ, ಅಶೋಕ ಯಲಿಗಾರ, ರಾಮಣ್ಣ ಬೆಳಧಡಿ, ಶಿವಾನಂದಪ್ಪ ಯಾಳವಾಡ ಉಪಸ್ಥಿತರಿದ್ದರು. ಡಾ. ಎಸ್.ಸಿ. ಸರ್ವಿ  ಸ್ವಾಗತಿಸಿದರು. ವೆಂಕಟೆಶ ಜುಂಜಣಿ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here