ಬೆಂಗಳೂರು:-ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುವ ಮುನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಾವುಕರಾಗಿದ್ದಾರೆ.
Advertisement
ಚಿಕಿತ್ಸೆಗಾಗಿ ಅಮೇರಿಕಾಗೆ ನಟ ಶಿವಣ್ಣ ತೆರಳುತ್ತಿದ್ದು, ಕೆಂಪೇಗೌಡ ಏರ್ಪೋಟ್ ಗೆ ಆಗಮಿಸಿದ ವೇಳೆ ಅಭಿಮಾನಿಗಳತ್ತ ಪ್ರೀತಿಯಿಂದ ಕೈ ಬೀಸಿದ್ದಾರೆ.
ಡಿ.24ರಂದು ಶಿವಣ್ಣಗೆ ಯುಎಸ್‌ನಲ್ಲಿ ಸರ್ಜರಿ ನಡೆಯಲಿದೆ. ಈ ಹಿನ್ನೆಲೆ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಏರ್‌ಪೋರ್ಟ್ ಪ್ರವೇಶಿಸುವ ಮುನ್ನ ಭಾವುಕರಾಗಿ ಅಭಿಮಾನಿಗಳತ್ತ ನಟ ಕೈ ಬೀಸಿದ್ದಾರೆ. ಸರ್ಜರಿಯ ಬಳಿಕ ಮುಂದಿನ ತಿಂಗಳು ಜನವರಿ 26ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.