ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರೈತರು ಪ್ರತಿ ವರ್ಷ ಒಂದೇ ಬೆಳೆಯ ಬದಲಾಗಿ ಬೆಳೆ ಪರಿವರ್ತನಾ ಪದ್ಧತಿ ಅನುಸರಿಸುವುದರಿಂದ ರೋಗಬಾಧೆ ತಡೆಗಟ್ಟುವದರೊಂದಿಗೆ ಮಣ್ಣಿನ ಫಲವತ್ತತೆ ಹೆಚ್ಚಿಸಿ ರೋಗಮುಕ್ತ ಮತ್ತು ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಉಪಕೃಷಿ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್ ಹೇಳಿದರು.
ಅವರು ಬುಧವಾರ ಲಕ್ಮೇಶ್ವರ ತಾಲೂಕಿನ ಯಳವತ್ತಿ, ಗೊಜನೂರ, ಲಕ್ಮೇಶ್ವರ ಭಾಗದಲ್ಲಿ ಹಿಂಗಾರಿ ಹಂಗಾಮಿನ ಬೆಳೆಗಳಿಗೆ ತಗುಲುವ ಕೀಟ ಮತ್ತು ರೋಗಗಳ ಬಗ್ಗೆ ಸಮೀಕ್ಷಾ ಕಾರ್ಯ ನಡೆಸಿ ಹತೋಟಿ ಮತ್ತು ಮುಂಜಾಗೃತೆಗಾಗಿ ರೈತರಿಗೆ ತಿಳುವಳಿಕೆ ನೀಡುವ ನಿಟ್ಟನಲ್ಲಿ ಕೃಷಿ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಆರಂಭಿಸಿದ ಹಿಂಗಾರಿನ ಬೆಳೆಗಳ ಕ್ಷಿಪ್ರ ಸಂಚಾರ ಸಮೀಕ್ಷೆ ಕೈಗೊಂಡ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದರು.
ಮಣ್ಣಿನಲ್ಲಿ ಸೇರಿಕೊಂಡಿರುವ ಶಿಲೀಂದ್ರಗಳಿAದ ಉಂಟಾಗುವ ಬೆಳೆ ಸೊರಗು ರೋಗಬಾಧೆ ನಿಯಂತ್ರಣ ಕಷ್ಟಸಾಧ್ಯ. ಅದಕ್ಕಾಗಿ ರೈತರು ಮಾಗಿ ಉಳುಮೆ, ಮಣ್ಣು ಪರೀಕ್ಷೆ, ಬೀಜೋಪಚಾರ, ಬೆಳೆ ಬದಲಾವಣೆಯಂತಹ ಕ್ರಮಗಳನ್ನು ಅನುಸರಿಸಬೇಕು ಎಂದರು.
ಲಕ್ಮೇಶ್ವರದಲ್ಲಿ ರೈತ ಕೆಂಚನಗೌಡ ಪಾಟೀಲ ಅವರ ಕಡಲೆ ಬೆಳೆ ಕಾಯಿಕಟ್ಟುವ ಪೂರ್ವ (೨ ತಿಂಗಳು)ದಲ್ಲಿಯೇ ಸಿಡಿ/ನೆಟೆರೋಗಕ್ಕೆ ಒಣಗಿ ಸಂಪೂರ್ಣ ಬೆಳೆ ಹಾಳಾಗಿರುವುದನ್ನು ವೀಕ್ಷಣೆಗೆ ಹೋದಾಗ ರೈತರು ಬಿತ್ತನೆ ಪೂರ್ವಲ್ಲಿಯೇ ರೈತರಿಗೆ ತಿಳುವಳಿಕೆ, ಜಾಗೃತಿ ಕಾರ್ಯಕ್ರಮ ಮಾಡಬೇಕು. ಈ ವರ್ಷ ಬೀಜೋಪಚಾರ ಸೇರಿ ಮುಂಜಾಗೃತಾ ಕ್ರಮದಿಂದ ಬಿತ್ತನೆ ಮಾಡಿದರೂ ಅಕಾಲಿಕ ಮಳೆ, ಫೆಂಗಲ್ ಚಂಡಮಾರುತದಿAದ ಬಹುತೇಕ ರೈತರ ಕಡಲೆ ಬೆಳೆ ರೋಗಕ್ಕೆ ತುತ್ತಾಗಿದೆ. ಆದ್ದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಹಾರ ಕಲ್ಪಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಯೋಜನೆಯಡಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಮಾತ್ರ ಪರಿಹಾರ ಕಲ್ಪಿಸಬಹುದಾಗಿದೆ. ಆದರೆ ಲಕ್ಷೆö್ಮÃಶ್ವರ ತಾಲೂಕಿನ ಅನೇಕ ಕಡೆ ಮಾತ್ರ ಹೆಚ್ಚು ಪ್ರಮಾಣದಲ್ಲಿ ಕಡಲೆಗೆ ನೆಟೆ/ಸಿಡಿ ರೋಗ ಆವರಿಸಿದೆ. ಈ ಬಗ್ಗೆ ವರದಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ರೈತರಿಗೆ ಹಿಂಗಾರಿ ಬೆಳೆಗಳಲ್ಲಿ ಕೀಟ, ರೋಗಬಾಧೆ ನಿಯಂತ್ರಣದ ಬಗ್ಗೆ ತಿಳುವಳಿಕೆ ನೀಡುವ ನಿಟ್ಟನಲ್ಲಿ ಇಲಾಖೆ ಅನೇಕ ಕಾರ್ಯಕ್ರಮ ಮಾಡುತ್ತೇವೆ. ಇನ್ನೊಂದು ವಾರದಲ್ಲಿ ಲಕ್ಮೇಶ್ವರ ಭಾಗದಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗುವುದು ಎಂದರು.
ಗದಗ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಸ್ಯ ಕೀಟಶಾಸ್ತçಜ್ಞ ಡಾ. ಸಿ.ಎಮ್. ರಫಿ ಮಾತನಾಡಿ, ೩ರಿಂದ ೫ ವರ್ಷ ಬೆಳೆ ಪರಿವರ್ತನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ತೊಗರಿ ಲಾಭದಾಯಕವಾಗಿದ್ದು, ಪರ್ಯಾಯ ಬೆಳೆಯಾಗಿ ತೊಗರಿ ಬೆಳೆಯಬೇಕು. ಹಿಂಗಾರಿನಲ್ಲಿ ಜೋಳ, ಗೋದಿ, ಕುಸುಬೆ, ಹೊಸ ತಳಿಯ ಕಡಲೆಯನ್ನು ಬೀಜೋಪಚಾರದಂತಹ ಮುಂಜಾಗೃತಾ ಕ್ರಮದೊಂದಿಗೆ ಬಿತ್ತನೆ ಮಾಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಕೊರವನವರ, ಪ್ರಾಣೇಶ, ರೇವಣಪ್ಪ ಮನಗೂಳಿ, ಮೇಘನಾ ನಾಡಿಗೇರ, ಅಣ್ಣಿಗೇರಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ತಳಿ ಶಾಸ್ತçಜ್ಞ ಡಾ. ಮೋಟಗಿ, ಅಣ್ಣಿಗೇರಿ ಕೃಷಿ ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತçಜ್ಞ ಡಾ.ಸಂಗಶೆಟ್ಟಿ ಬಾಲಕುಂದೆ, ಸಸ್ಯ ರೋಗ ಶಾಸ್ತçಜ್ಞ ಡಾ.ಶಿವಲಿಂಗಪ್ಪ ಹೋಟ್ಕರ, ಪಿ.ಕೆ. ಹೊನ್ನಪ್ಪನವರ ಸೇರಿ ಕೃಷಿ ಇಲಾಖೆಯ ಕ್ಷೇತ್ರ ಮಟ್ಟದ ಅಧಿಕಾರಿಗಳು, ರೈತರಾದ ವಿರೂಪಾಕ್ಷ ಆದಿ ಮುಂತಾದವರು ಪಾಲ್ಗೊಂಡಿದ್ದರು.
ಕಡಲೆ ಬೆಳೆ ಗದಗ ಜಿಲ್ಲೆಯ ಹಿಂಗಾರಿನ ಸಾಂಪ್ರದಾಯಿಕ ಬೆಳೆಯಾಗಿದೆ. ಅನೇಕ ರೈತರು ಪ್ರತಿ ವರ್ಷ ಹಿಂಗಾರಿನಲ್ಲಿ ಕಡಲೆಯನ್ನೇ ಪ್ರಮುಖವಾಗಿ ಬೆಳೆಯುತ್ತಾರೆ. ಬೆಳೆ ಬದಲಾವಣೆಯಾಗದ್ದರಿಂದ ಮಣ್ಣಿನಲ್ಲಿ ಸೇರಿಕೊಂಡಿರುವ ಶಿಲೀಂದ್ರನಾಶಕಗಳು, ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಹವಾಮಾನ ವೈಪರಿತ್ಯದಿಂದ ಬೆಳೆ ಒಣಗಲು ಪೂರಕ ವಾತಾವರಣ ಸೃಷ್ಟಿಯಾದಂತಾಗಿದೆ ಎಂದು ಡಾ. ಸಿ.ಎಮ್. ರಫಿ ತಿಳಿಸಿದರು.