ಬೆಳಗಾವಿ: ಅಂಬೇಡ್ಕರ್ ಅವರಿಗೆ ಅಗೌರವ ತೋರಿರೋದು ಕಾಂಗ್ರೆಸ್ʼನವರು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಅಗೌರವ ತೋರಿರೋದು ಕಾಂಗ್ರೆಸ್ನವರು. ಅವರ ಸ್ಮಾರಕಗಳನ್ನು ಅಭಿವೃದ್ಧಿ ಮಾಡಿ ವಿಶ್ವಕ್ಕೆ ತಿಳಿಸಿಕೊಟ್ಟದ್ದು ನರೇಂದ್ರ ಮೋದಿ ಅವರು.
Advertisement
ಇವತ್ತು ಅಮಿತ್ ಶಾ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮುಖಾಂತರ ಒಂದು ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ಸದಾ ಗೌರವವನ್ನು ಇಟ್ಟುಕೊಂಡಿದೆ. ಅವರ ಸ್ಮಾರಕಗಳನ್ನು ಅಭಿವೃದ್ಧಿ ಮಾಡಿದ್ದೀರಿ. ಇದು ಒಂದು ರೀತಿ ಕಾಂಗ್ರೆಸ್ ವೋಟಿನ ಪಾಲಿಟಿಕ್ಸ್ಗೋಸ್ಕರ ಈ ತರಹ ನಾಟಕಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.