ಮೈಸೂರು: ಮುಡಾ ಹಗರಣ ಸಿನ್ಮಾದ ನಿರ್ದೇಶಕರು, ನಿರ್ಮಾಪಕರು ಎಲ್ಲಾ ಬಿಜೆಪಿ, ಜೆಡಿಎಸ್ ನವರು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಕೊಟ್ಟಿರುವುದು ಬೆಳಗ್ಗೆ 10:30ರ ಫುಟೇಜ್ ಮಾತ್ರ. ಅಂದಿನ ಇಡೀ ದಿನದ ಫುಟೇಜ್ ಯಾಕೆ ಕೊಟ್ಟಿಲ್ಲ? ನಮ್ಮ ಬಳಿಯೂ ಕೆಲವು ಫುಟೇಜ್‌ಗಳಿವೆ. ಅವನ್ನು ನಾವು ಪೊಲೀಸರಿಗೆ ನೀಡುತ್ತೇವೆ.
ಸ್ನೇಹಮಯಿ ಕೃಷ್ಣ ಬಿವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿಲ್ವ? ವಿಜಯೇಂದ್ರ ಜೊತೆ ಸ್ನೇಹಮಯಿ ಕೃಷ್ಣ ಡೀಲ್ ಕುದುರಿಸಿಲ್ವ? ಬೆಂಗಳೂರಿನಲ್ಲಿ ಐಷಾರಾಮಿ ಹೋಟೆಲ್ ನಲ್ಲಿ ಸ್ನೇಹಮಹಿ ಕೃಷ್ಣ ಗಾಗಿ ಒಂದು ರೂಂ ಮೀಸಲು ಇದೆ. ಈ ಕೇಸ್ ಗೆ ಎಷ್ಟು ಡೀಲ್ ಆಗಿದೆ ಎಂಬುದು ನಮಗೆ ಗೊತ್ತು. ಸ್ನೇಹಮಹಿ ಕೃಷ್ಣ ಇದುವರೆಗೆ ಎಷ್ಟೋ ಜನಕ್ಕೆ ಬ್ಲ್ಯಾಕ್ ಮೇಲ್ ಮಾಡಿಲ್ವಾ? ಮುಡಾ ಹಗರಣ ಸಿನ್ಮಾದ ನಿರ್ದೇಶಕರು, ನಿರ್ಮಾಪಕರು ಎಲ್ಲಾ ಬಿಜೆಪಿ, ಜೆಡಿಎಸ್ ನವರು ಎಂದು ಆರೋಪಿಸಿದ್ದಾರೆ.