ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತ ಮೊಗಿಲಯ್ಯ ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ.
ಮೊಗಿಲಯ್ಯ ಅವರು ಹಲವು ದಿನಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಇಂದು ಮೊಗಿಲಯ್ಯ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಅಂದಹಾಗೆ, ‘ಬಲಗಂ’ ಸಿನಿಮಾದಲ್ಲಿ ಹಾಡುವ ಮೂಲಕ ಖ್ಯಾತಿ ಗಳಿಸಿದರು. ಮೊಗಿಲಯ್ಯ ಅವರ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ ಜೊತೆಗೆ ಜನಪದ ಕಲೆಗೆ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಸಹ ನೀಡಿದೆ. ಸಾಂಪ್ರದಾಯಿಕ ಜಾನಪದ ಸಂಗೀತಕ್ಕೆ ಅವರ ಮಹತ್ವದ ಕೊಡುಗೆಗಳಿಗೆ ಹೆಸರುವಾಸಿಯಾದ ಅವರಿಗೆ 2022 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.
ದರ್ಶನಂ ಮೊಗಿಲಯ್ಯ ಬಲಗಂ ಚಿತ್ರದ ಮೂಲಕ ಖ್ಯಾತಿ ಗಳಿಸಿದರು. ಅವರು ತೊಡುಗ ಮಾ ತೊಡುಂಡಿ ಹಾಡಿನ ಮೂಲಕ ಜನಪ್ರಿಯತೆ ಪಡೆದರು. ಪವನ್ ಕಲ್ಯಾಣ್ ಅವರ ಚಿತ್ರ ಭೀಮ್ಲಾ ನಾಯಕ್‌ಗಾಗಿ ಶೀರ್ಷಿಕೆ ಗೀತೆಯನ್ನು ಸಹ ಹಾಡಿದ್ದರು.