ಮಠಕ್ಕೆ ಕಳುಹಿಸಿದ್ದ ವಿದ್ಯುತ್ ಬಿಲ್ ವಾಪಸ್: ಸರ್ಕಾರದ ನಿರ್ಧಾರ ಸ್ವಾಗತಿಸಿದ ಸಿದ್ದಗಂಗಾ ಶ್ರೀ!

0
Spread the love

ಚಾಮರಾಜನಗರ:- ಸಿದ್ದಗಂಗಾ ಮಠಕ್ಕೆ ಕಳುಹಿಸಿದ್ದ ವಿದ್ಯುತ್ ಬಿಲ್ ವಾಪಸ್ ಪಡೆದಿರುವ ಸರ್ಕಾರದ ನಿರ್ಧಾರವನ್ನು ಸಿದ್ದಗಂಗಾ ಶ್ರೀ ಸ್ವಾಗತ ಮಾಡಿದ್ದಾರೆ.

Advertisement

ಚಾಮರಾಜನಗರದಲ್ಲಿ ಹರವೆ ವಿರಕ್ತ ಮಠದ ಶಾಖಾ ಮಠ ಉದ್ಘಾಟನೆಗೆ ಬಂದಿದ್ದ ವೇಳೆ ಅವರು ಮಾತನಾಡಿದರು. ಮಠಕ್ಕೆ ಕಳುಹಿಸಿದ್ದ ವಿದ್ಯುತ್ ಬಿಲ್‌ನ್ನು ವಾಪಸ್ ತೆಗೆದುಕೊಂಡಿರುವುದು ಸಂತೋಷ ಎಂದರು. ಕೆಐಎಡಿಬಿ ಇಂದ ಕೆರೆಗೆ ನೀರು ತುಂಬಿಸಿದ್ದರು. ಅವರು ಕೆರೆಯಿಂದ ನೀರನ್ನು ಎಲ್ಲಿಗೂ ಬಿಟ್ಟಿಲ್ಲ. ಆದರೆ, ವಿದ್ಯುತ್ ಬಿಲ್‌ನ್ನು ಮಠಕ್ಕೆ ಕೊಟ್ಟಿದ್ದರು. ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸಮಸ್ಯೆ ಪರಿಹರಿಸಿರುವುದು ಸಂತೋಷ ಎಂದು 70 ಲಕ್ಷ ರೂ. ವಿದ್ಯುತ್ ಬಿಲ್ ಮನ್ನಾಗೆ ಸಿದ್ದಗಂಗಾ ಶ್ರೀ ಸಂತಸ ವ್ಯಕ್ತಪಡಿಸಿದರು.

ಘಟನೆ ಹಿನ್ನೆಲೆ:

ನಾಡಿನ ಅಗ್ರಮಾನ್ಯ ಮಠಗಳಲ್ಲಿ ಒಂದಾಗಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್ ಬಿಲ್ ಕಳುಹಿಸಲಾಗಿತ್ತು. ಕೆಐಎಡಿಬಿಯು ಸಿದ್ದಗಂಗಾ ಮಠಕ್ಕೆ ಬರೋಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವಂತೆ ಪತ್ರ ಬರೆದಿರುವುದು ಅಚ್ಚರಿ ಹುಟ್ಟು ಹಾಕಿತ್ತು.


Spread the love

LEAVE A REPLY

Please enter your comment!
Please enter your name here