ಅಮಿತ್ ಶಾರನ್ನು ಕೂಡಲೇ ವಜಾಗೊಳಿಸಿ: ಗ್ಯಾರಂಟಿ ಸಮಿತಿ ಸದಸ್ಯೆ ಜ್ಯೋತಿ ಎಂ.ಗೊಂಡಬಾಳ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೇಂದ್ರದ ಗೃಹ ಮಂತ್ರಿಗಳು ತಾವು ಎಂತಹ ಅಪರಾಧದ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ಇನ್ನು ರಾಜ್ಯದ ಸಿ.ಟಿ ರವಿಯವರ ವರ್ತನೆಯೂ ಜಗತ್ತಿಗೆ ಗೊತ್ತಿರುವ ವಿಷಯ. ಇವರ ಅಧಿಕಾರದ ಲಾಲಸೆಗೆ ಈ ರೀತಿಯ ಮಾತುಗಳು ಬರುತ್ತಿವೆ ಎಂದು ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಸಮಿತಿ ಸದಸ್ಯರಾದ ಜ್ಯೋತಿ ಎಂ.ಗೊಂಡಬಾಳ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಸಂವಿಧಾನವನ್ನು ರಚಿಸಿ ಸರ್ವರಿಗೂ ಬದುಕುವ ಹಕ್ಕು ಕೊಟ್ಟ ಧೀಮಂತ ನಾಯಕ ಬಾಬಾಸಾಹೇಬರ ಹೆಸರನ್ನು ಹೇಳಿದರೆ ಗೃಹ ಮಂತ್ರಿಗಳಿಗೆ ಶೋಕಿ ಅನಿಸುತ್ತಿದೆ. ತಾವು ಶೋಕಿಗಾಗಿ ಶ್ರೀರಾಮನ ಹೆಸರನ್ನು, ಪರಮ ಭಕ್ತ ಹನುಮನ ಹೆಸರನ್ನು ಹೇಳಿಕೊಂಡು ತಿರುಗಿದಂತೆ ಭಾವಿಸಿರುವ ಅಮಿತ್ ಶಾ ಅವರನ್ನು ಕೂಡಲೇ ಸರಕಾರ ವಜಾಗೊಳಿಸಬೇಕು ಎಂದು ಕಿಡಿಕಾರಿದ್ದಾರೆ.

ಇನ್ನು, ರಾಜ್ಯದ ವಿ.ಪ ಸದಸ್ಯ ಸಿ.ಟಿ ರವಿ ಹಗಲಲ್ಲೂ ನಶೆಯಲ್ಲಿ ಇದ್ದ ರೀತಿ ಮಾತನಾಡಿ, ಹೆಣ್ಣುಮಗಳ ಬಗ್ಗೆ ಅತ್ಯಂತ ವಿಷಾದಕರ ಮಾತನ್ನು ಆಡಿದ್ದು, ಅಲ್ಲದೇ ಬಿಜೆಪಿ ಮುಖಂಡರು ಸಿಟಿ ರವಿ ಪರವಾಗಿ ಬೀದಿಗಳಿದು ಪ್ರತಿಭಟನೆ ಮಾಡುತ್ತಾರೆ ಅಂದರೆ ಅವರಿಗೆ ಸಂವಿಧಾನದ ಬಗ್ಗೆ, ಹೆಣ್ಣುಮಕ್ಕಳ ಬಗ್ಗೆ ಮತ್ತು ಶೋಷಿತರ ಪರವಾಗಿ ಇರುವ ಸರಕಾರಗಳ ಬಗ್ಗೆ ಇರುವ ಅಸಹನೀಯತೆಯಿಂದ ಈ ರೀತಿಯ ಹೇಳಿಕೆಗಳು ಮತ್ತು ಮಾತುಗಳು ಬರುತ್ತವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here