ಕೃಷಿಕ ಸಮಾಜದ ಸದಸ್ಯರ ಅವಿರೋಧ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಾ ಕೃಷಿಕ ಸಮಾಜದ 2025-2030ರವರೆಗೆ ಐದುವರ್ಷಗಳ ಅವಧಿಯ ಕಾರ್ಯಕಾರಿ  ಸಮಿತಿ ಚುನಾವಣೆಯಲ್ಲಿ ಅವಿರೋಧವಾಗಿ 15 ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದ್ದಾರೆ.

Advertisement

ನಾಮಪತ್ರ ಪರಿಶೀಲನೆ ನಂತರ ಕಣದಲ್ಲಿ ಉಳಿದ ಅಭ್ಯರ್ಥಿಗಳ ಅವಿರೋಧ ಆಯ್ಕೆ ಘೋಷಿಸಲಾಯಿತು. ನಂತರ ಅವಿರೋಧವಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು. 15 ಸ್ಥಾನಗಳಿಗೆ ಬಸವರಾಜೇಂದ್ರಪ್ಪ ಶಿವಪ್ಪ ಇಟಗಿ, ಶೇಖಪ್ಪ ಉರ್ಫ್ ಚಂದ್ರಶೇಖರಪ್ಪ ಫಕ್ಕೀರಪ್ಪ ಕರಿನಾಗಣ್ಣವರ, ನಿಂಗಪ್ಪ ಹೊನಕೇರಪ್ಪ ಬನ್ನಿ, ಮಹಾಂತಗೌಡ ಶೇಖರಗೌಡ ದೊಡ್ಡಗೌಡ್ರ, ಶಿದ್ದಲಿಂಗೇಶ್ವರ ಮಲ್ಲಪ್ಪ ರಗಟಿ, ವಿರುಪಾಕ್ಷಪ್ಪ  ಗುಡ್ಡಪ್ಪ ಪಡಗೇರಿ, ರಮೇಶ ಬಸವರಾಜ ಉಪನಾಳ, ವಿರೇಂದ್ರ ಶಂಕರಗೌಡ ಪಾಟೀಲ, ರಾಜೀವ ಗೊಡಚಪ್ಪ ಕುಂಬಿ, ಫಕ್ಕೀರಗೌಡ ಅನಂತಗೌಡ ಪಾಟೀಲ, ಬಸವರೆಡ್ಡಿ ಚನ್ನಪ್ಪ ಹನುಮರಡ್ಡಿ, ಮಹೇಶ ಬಸೆಟ್ಟಪ್ಪ ಹೊಗೆಸೊಪ್ಪಿನ್, ಅಶೋಕ ಷಣ್ಮುಖಪ್ಪ ನೀರಾಲೋಟಿ, ಶಿವಯೋಗಿ ಸಿದ್ದಲಿಂಗಪ್ಪ ಮಾನ್ವಿ, ಬಸಪ್ಪ ಫಕ್ಕೀರಪ್ಪ ಹಂಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here